ಚಾರ್ಮಾಡಿ : ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಉಪಟಳ ಜೋರಾಗಿದ್ದು, ರಾತ್ರಿ ಹೊತ್ತು ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದರೆ ಕಾಡಾನೆಗಳ ಹಾವಳಿ ಸರ್ವೇ ಸಾಮಾನ್ಯ ಎಂಬಂತಾಗಿದೆ.

ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಸರ್ಕಾರಿ ಬಸ್ ಸಂಚರಿಸುವ ವೇಳೆ ಏಕಾಏಕಿ ಕಾಡಾನೆ ಬಸ್ಸಿಗೆ ಅಡ್ಡ ಬಂದು ನಿಂತಿದೆ. ಕೂಡಲೇ ಎಚ್ಚೆತ್ತ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿದ್ದಾರೆ.
ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನ ಎದುರು ನಿಂತಿದ್ದ ಆನೆಯನ್ನು ಕಂಡು ಗಾಬರಿಗೊಂಡಿದ್ದಾರೆ, ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆಯಲ್ಲೇ ನಿಂತ ಕಾಡಾನೆ ಬಳಿಕ ಅರಣ್ಯಕ್ಕೆ ಪ್ರವೇಶ ಮಾಡಿದೆ. ಇದರಿಂದ ಚಾರ್ಮಾಡಿ ಘಾಟಿಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.




























