ಮುಂಬೈ : ಮಹಿಳೆಯೊಬ್ಬರು ಆನ್ಲೈನ್ ಮೂಲಕ ಆರ್ಡರ್ ಮಾಡಿ ಐಸ್ಕ್ರೀಮ್ ತರಿಸಿಕೊಂಡು ತಿನ್ನುವಾಗ ಅದರಲ್ಲಿ ಮನುಷ್ಯನ ಬೆರಳು ಬಾಯಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಮಹಿಳೆ ಗಾಬರಿಗೊಂಡಿದ್ದಾರೆ ಎನ್ನಲಾಗಿದ್ದು, ಮಹಾರಾಷ್ಟ್ರದ ಮುಂಬೈ ಸಿಟಿಯ ಮಲಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಆನ್ಲೈನ್ ಮೂಲಕ ಐಸ್ಕ್ರೀಮ್ ಆರ್ಡರ್ ಮಾಡಿ ತರಿಸಿಕೊಂಡಿದ್ದರು. ಅದರಂತೆ ಐಸ್ಕ್ರೀಮ್ ಡೆಲಿವರಿ ಮಾಡಿದ ಬಳಿಕ ತಿನ್ನುವಾಗ ಅದರಲ್ಲಿ ಮನುಷ್ಯನ ಕೈ ಬೆರಳು ಬಾಯಿಗೆ ಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ಒಂದು ಕ್ಷಣ ಶಾಕ್ ಆಗಿದ್ದಾರೆ. ತಕ್ಷಣ ಮಲಾಡ್ ಪ್ರದೇಶದ ಪೊಲೀಸ್ ಠಾಣೆಗೆ ತೆರಳಿ ಐಸ್ ಕ್ರೀಮ್ ಕಂಪನಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪರೀಕ್ಷೆ ವೇಳೆ ಐಸ್ಕ್ರೀಮ್ನಲ್ಲಿ ಸಿಕ್ಕಿರುವುದು ಕೈ ಬೆರಳ ಅಥವಾ ಮಾನವನ ದೇಹದ ಇನ್ಯಾವುದಾದರು ಬೇರೆ ಅಂಗನಾ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರಿಯಾಗಿ ಗೊತ್ತಾಗದ ಕಾರಣ ಸದ್ಯ ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಐಸ್ ಕ್ರೀಮ್ ಹಾಗೂ ಐಸ್ ಕ್ರೀಮ್ನಲ್ಲಿ ಪತ್ತೆಯಾದ ಮನುಷ್ಯನ ಬೆರಳು ಎನ್ನಲಾದ ಅಂಗವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.