ಉಡುಪಿ : ಭೀಕರ ಅಪಘಾತ ಸಂಭವಿಸಿದ್ದು, ಡಿವೈಡರ್ಗೆ ಡಿಕ್ಕಿ ಹೊಡೆದ ಕಾರೊಂದು ನಜ್ಜುಗುಜ್ಜಾದ ಘಟನೆ ನಡೆದಿದೆ.

ಉಡುಪಿ ನಗರದ ಅಂಬಾಗಿಲು ಭಾಗದಲ್ಲಿ ತಡರಾತ್ರಿ ನಡೆದ ಘಟನೆ ಇದಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಾತ್ರವಲ್ಲದೆ ಕಾರಿ ಬಿಡಿ ಭಾಗಗಳು ರಸ್ತೆಯೆಲ್ಲಾ ಹರಡಿಕೊಂಡಿವೆ. ಕಾರಿನ ಇಂಜಿನ್ ಕೆಲ ದೂರ ಹೋಗಿ ಬಿದ್ದಿದೆ.
ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಸಂಚರಿಸುತಿದ್ದ ಮಾರುತಿ ಎಸ್ ಕ್ರಾಸ್ ಕಾರು ಅಪಘಾತಕ್ಕೀಡಾಗಿದ್ದು, ಅತೀ ವೇಗದಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.