ಪುತ್ತೂರು : ಕೆಲ ತಿಂಗಳ ಹಿಂದೆ ರಸ್ತೆ ಬದಿ ನೆಡಲಾಗಿದ್ದ ಮಾವಿನ ಗಿಡ ಗಾಳಿಗೆ ಬಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರು ಕಂಬ ಆಧಾರವಾಗಿಟ್ಟು ಸರಿಯಾಗಿ ನಿಲ್ಲುವ ರೀತಿ ಹಾರೈಕೆ ಮಾಡಿದರು.

ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಕೆಲ ತಿಂಗಳ ಹಿಂದೆ ಕಾಟು ಮಾವಿನ ಗಿಡಗಳನ್ನು ನೆಡಲಾಗಿದ್ದು, ಈ ಗಿಡಗಳಲ್ಲಿ ಒಂದು ಗಿಡ ಗಾಳಿಗೆ ಬಾಗಿತ್ತು.
ಇದನ್ನು ಗಮನಿಸಿದ ಶಾಸಕರು ಅದಕ್ಕೆ ಕಂಬವೊಂದನ್ನು ಆಧಾರವಾಗಿಟ್ಟು ಸರಿಯಾಗಿ ನಿಲ್ಲುವ ರೀತಿ ಹಾರೈಕೆ ಮಾಡಿದರು.




























