ಪುತ್ತೂರು : ಪ್ರವೀಣ್ ನೆಟ್ಟಾರು ಹತ್ಯೆಗೆ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ರವಾನೆ ಮಾಡುತ್ತಿದ್ದು, ಪ್ರವೀಣ್ ನೆಟ್ಟಾರು ಹೆಸರಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ತಪ್ಪು ಸಂದೇಶ ರವಾನಿಸಿ ಹೆಸರು ಕೆಡಿಸಬೇಡಿ ಎಂದು ಪ್ರವೀಣ್ ನೆಟ್ಟಾರು ರವರ ತಾಯಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರವೀಣ್ ನೆಟ್ಟಾರು ಅವರ ತಾಯಿ, ‘ಚಿಕ್ಕ ವಯಸ್ಸಿನಿಂದಲೇ ನನ್ನ ಮಗ ಸಂಘ, ಪಕ್ಷದ ಬಗ್ಗೆ ತುಂಬಾ ಒಲವು ಹೊಂದಿದ್ದ, ಯಾರೋ ಕಿಡಿಗೇಡಿಗಳು ಅವನನ್ನು ಹತ್ಯೆ ಮಾಡಿ ಬಿಟ್ರು. ಆ ಘಟನೆ ನಡೆದಾಗಿನಿಂದ ಈವರೆಗೆ ಬಿಜೆಪಿ ಪಕ್ಷದವರು ನಮ್ಮ ಕೈ ಬಿಟ್ಟಿಲ್ಲ., ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಮಗೆ ಮನೆಯನ್ನು ನಿರ್ಮಾಣ ಮಾಡಿ ಕೊಟ್ರು, ಈವರೆಗೆ ಕೈ ಬಿಟ್ಟಿಲ್ಲ. ಇನ್ಮುಂದೆಯೂ ನಮ್ಮ ಕೈ ಬಿಡಲ್ಲ ಅನ್ನೋ ನಮ್ಮ ನಂಬಿಕೆಯಿದೆ’.
ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಇಲ್ಲಸಲ್ಲದ ಅಪವಾದದ ಮಾತುಗಳು ಕೇಳಿಬರುತ್ತಿದೆ. ನಾವು ಅವರ ಬಗ್ಗೆ ಈ ರೀತಿಯಾಗಿ ನೆನೆದವರೇ ಅಲ್ಲ, ನಮ್ಮ ಮನೆ ಮಗನ ಹಾಗೆ ಇದ್ದಾರೆ. ಯಾರು ನನ್ನ ಮಗನನ್ನು ಹತ್ಯೆ ಮಾಡಿಸಿದ್ರಾ ಅವರನ್ನು ದೇವರು ನೋಡುತ್ತಾರೆ.
ನಳಿನಣ್ಣ ಆವತ್ತಿನಿಂದಾ ಇವತ್ತಿನವರೆಗೆ ನಮ್ಮ ಜೊತೆ ಇದ್ದಾರೆ. ನನ್ನ ಮಗ ಪ್ರವೀಣ್ ನ ಹೆಸರಿನಲ್ಲಿ ನಳಿನಣ್ಣನ ಹೆಸರು ಕೆಡಿಸುವುದು ಬೇಡ., ಸಾಮಾಜಿಕ ಜಾಲತಾಣಗಳಲ್ಲಿ ಪ್ರವೀಣ್ ನ ಹೆಸರು ಬಳಸಿ ತಪ್ಪು ಸಂದೇಶ ರವಾನಿಸಿ ಕಟೀಲ್ ಅವರ ಹೆಸರು ಕೆಡಿಸಬೇಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.



























