ಬೆಂಗಳೂರು : ನಟ ಯುವರಾಜ್ ಕುಮಾರ್ ಅವರ ಡಿವೋರ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಆರೋಪ ಮಾಡಿದ್ದ ಯುವರಾಜ್ ಕುಮಾರ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದೊಡ್ಮನೆ ಮಗ ಯುವರಾಜ್‌ಕುಮಾರ್ ಡಿವೋರ್ಸ್‌ಗೆ ಅರ್ಜಿ ಹಾಕಿದ್ದು ಸ್ಯಾಂಡಲ್‌ವುಡ್‌ಗೆ ಅತಿದೊಡ್ಡ ಶಾಕಿಂಗ್ ನ್ಯೂಸ್ ಆಗಿತ್ತು.
ಯುವರಾಜ್ ಕುಮಾರ್ ಅವರ ಈ ಡಿವೋರ್ಸ್ ಕೇಸ್‌ನಲ್ಲಿ ಸಹನಟಿ ಸಪ್ತಮಿಗೌಡ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಯುವರಾಜ್‌ಕುಮಾರ್ ಅವರ ಲೀಗಲ್ ನೋಟಿಸ್‌ಗೆ ಪತ್ನಿ ಶ್ರೀದೇವಿ ಭೈರಪ್ಪ ಅವರ ಬಹಳ ತೀಕ್ಷ್ಣವಾದ ತಿರುಗೇಟು ನೀಡಿದ್ದರು.
ಶ್ರೀದೇವಿ ಅವರು ಯುವರಾಜ್‌ಕುಮಾರ್ ಅವರಿಗೆ ನೀಡಿದ್ದ ಉತ್ತರದಲ್ಲಿ ನನ್ನ ಗಂಡನಿಗೆ ಸಹನಟಿ ಜೊತೆ ಸಂಬಂಧವಿದೆ. ಯುವರಾಜ್‌ಕುಮಾರ್ ಅವರು ಸಹನಟಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಅನ್ನೋ ಗಂಭೀರ ಆರೋಪ ಮಾಡಿದ್ದರು.
ಶ್ರೀದೇವಿ ಅವರ ಈ ಆರೋಪದ ಹಿನ್ನೆಲೆಯಲ್ಲಿ ಕಾಂತಾರ ಬೆಡಗಿ ನಟಿ ಸಪ್ತಮಿಗೌಡ ಅವರು ಕೋರ್ಟ್ ಮೆಟ್ಟಲೇರಿದ್ದಾರೆ. ಶ್ರೀದೇವಿ ಭೈರಪ್ಪ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಶ್ರೀದೇವಿ ಅವರು ಮಾನಹಾನಿ ಹೇಳಿಕೆ ನೀಡದಂತೆ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧ ಹೇರಿದೆ. ಈ ಅರ್ಜಿ ಸಂಬಂಧ ಕೋರ್ಟ್ ಶ್ರೀದೇವಿಗೆ ನೋಟಿಸ್ ಜಾರಿ ಮಾಡಿದೆ. ನಟ ಯುವ ರಾಜ್‌ಕುಮಾರ್ ಕೇಸ್‌ನಲ್ಲಿ ನನ್ನ ಹೆಸರು ತಳುಕು ಹಾಕಲಾಗಿದೆ. ಇಲ್ಲಸಲ್ಲದ ಆರೋಪಗಳನ್ನ ಹೊರಿಸಿ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಸಪ್ತಮಿಗೌಡ ಪರ ವಕೀಲ ಕಿರಣ್ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಕೋರ್ಟ್‌ನಲ್ಲಿ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ ಅವರು ಸಪ್ತಮಿ ಗೌಡ ಪರ ವಾದಿಸಿದರು.
ಬಹಿರಂಗವಾಗಿ ಆಗಿರುವ ತಪ್ಪಿಗೆ ಶ್ರೀದೇವಿ ಕ್ಷಮೆಯಾಚನೆ ಮಾಡಬೇಕು. ಒಂದು ವೇಳೆ ಮಾಡದೇ ಇದ್ದಲ್ಲಿ 10 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಅಂತ ವಾದಿಸಿದರು. ಇವರ ವಾದ ಕೇಳಿದ ನ್ಯಾಯಾಲಯ ಶ್ರೀದೇವಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.




























