ಪುತ್ತೂರು : ವಾರದ ಮೊದಲ ದಿನ ಅಂದರೆ ಸೋಮವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಪುತ್ತೂರು ಸಂತೆ’ ನಡೆಯುತ್ತಿದ್ದು, ಇಂದು (ಜೂ.17) ಬಕ್ರೀದ್ ಹಬ್ಬದ ಹಿನ್ನೆಲೆ ಸಂತೆ ಮೈದಾನ ಖಾಲಿ ಖಾಲಿಯಾಗಿದೆ.

‘ಪುತ್ತೂರು ಸಂತೆ’ ಹಿನ್ನೆಲೆ ಪ್ರತಿ ಸೋಮವಾರ ಕಿಲ್ಲೆ ಮೈದಾನದಲ್ಲಿ ಜನ ಜಂಗುಳಿ ಇರುತ್ತಿದ್ದು, ಮೈದಾನ ತುಂಬೆಲ್ಲಾ ವ್ಯಾಪಾರಸ್ಥರು, ಗ್ರಾಹಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದರು.
ಆದರೇ ಇಂದು (ಜೂ.17) ಬಕ್ರೀದ್ ಹಬ್ಬದ ಹಿನ್ನೆಲೆ ಹಲವು ವ್ಯಾಪಾರಸ್ಥರು ವ್ಯಾಪಾರಕ್ಕೆ ಬಾರದೆ ಇರುವ ಕಾರಣ ಬೆರಳೆಣಿಕೆಯಷ್ಟು ಜನ ಮಾತ್ರ ವ್ಯಾಪಾರ ನಡೆಸುತ್ತಿದ್ದಾರೆ. ಸಂತೆ ಮೈದಾನವೇ ಖಾಲಿ-ಖಾಲಿಯಾಗಿದೆ.



























