ವಿಟ್ಲ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ವಿಟ್ಲಮುಡ್ನೂರು, ಕುಳ ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಟೆಕಲ್ಲು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಟೆಕಲ್ಲು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಶಾಲನಗರ- ಕುಂಡಡ್ಕ, ಗುಣಶ್ರೀ ಕುಳ ಮತ್ತು ಅಂಗನವಾಡಿ ಕೇಂದ್ರ ಕುಳ ಇದರ ವಿದ್ಯಾರ್ಥಿಗಳಿಗೆ ಟೀ-ಶರ್ಟ್, ಪುಸ್ತಕ, ಶಾಲಾ ಬ್ಯಾಗ್ ವಿತರಣೆ, ನಿವೃತ್ತ ಸೈನಿಕರಿಗೆ, ಪ್ರಾಥಮಿಕ ಆರೋಗ್ಯಾ ಸುರಕ್ಷಾಧಿಕಾರಿಯವರಿಗೆ ಮತ್ತು ಆಶಾಕಾರ್ಯಕತೆಯರಿಗೆ ಸನ್ಮಾನ ಹಾಗೂ ಸಾರ್ವಜನಿಕ ಸಸಿ ವಿತರಣೆ ಕಾರ್ಯಕ್ರಮ ಕುಂಡಡ್ಕ ಇಡ್ಕಿದು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಸಂಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ಕೊಟೇಚಾ ಹಾಲ್ ನ ಮಾಲಕರಾದ ಶಶಾಂಕ್ ಕೊಟೇಚಾ, ವಿಟ್ಲಮೂಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರೋಹಿಣಿ ರಾಜೇಶ್, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ, ವಕೀಲರಾದ ಗೋವಿಂದರಾಜ್ ಪೆರುವಾಜೆ, ಬಾಬು ಆಳ್ವ, ಕುಂಡಡ್ಕ ಮಹಾಬಲೇಶ್ವರ ಭಟ್ ಆಲಂಗಾರು, ರಾಜೇಶ್ ಭಟ್ ಕುಳ ಭಾಗವಹಿಸಿದ್ದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾರ್ಯದರ್ಶಿ ರವಿ ಕುಮಾರ್, ಟ್ರಸ್ಟಿನ ಪದಾಧಿಕಾರಿಗಳಾದ ರಾಜು ಶೆಟ್ಟಿ ಕೆಮ್ಮಾಯಿ, ಶ್ರೀಕೃಷ್ಣ ವಿಟ್ಲ, ರವಿಶಂಕರ್ ವಿಟ್ಲ, ಅನಂತಪ್ರಸಾದ್ ವಿಟ್ಲ, ಲಕ್ಷ್ಮಣ್ ಮಾಡ, ಸತ್ಯನಾರಾಯಣ ಅಡ್ಯನಡ್ಕ, ಮನೋಹರ್ ಶೆಟ್ಟಿ ಜೈನರೆಕೋಡಿ, ಶ್ರೀನಿವಾಸ್ ಶಿಲ್ಪಾ ಫರ್ನಿಚರ್, ವಿನೋದ್ ಮಾಡತ್ತಡ್ಕ, ಪ್ರವೀಣ್ ಮಾಡತ್ತಡ್ಕ, ತಿಲಕ್ ಮೂಡೈಮಾರ್, ಮಧುಕರ ಅಬೀರಿ, ಕೀರ್ತನ್ ಮಾನಜೆಮೂಲೆ, ಪುರಂದರ ಪಿಲಿಪ್ಪೆ, ಪದ್ಮನಾಭ ಮಂಜಪಾಲ್, ಅಕ್ಷಯ್ ಮರುವಾಳ, ಪ್ರವೀಣ್ ಹಡೀಲು ಉಪಸ್ಥಿತರಿದ್ದರು.

ಟ್ರಸ್ಟ್ ನ ಪದಾಧಿಕಾರಿಗಳಾದ ಹರೀಶ್ ಪೂಜಾರಿ ಸ್ವಾಗತಿಸಿದರು. ಸೌಮ್ಯ ರಾಜೇಶ್ ಭಟ್ ಪ್ರಾರ್ಥಿಸಿದರು. ಗಿರೀಶ್ ಹಡೀಲು ಧನ್ಯವಾದಗೈದರು. ಹರೀಶ್ ನೀರಕೋಡಿ, ಸೌಮ್ಯ ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.


