ಬೆಂಗಳೂರು : ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಮನೆ ಕೆಲಸದಾಕೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ ಭವಾನಿ ರೇವಣ್ಣ ಸಿಲುಕಿಕೊಂಡಿದ್ದರು. ಆದರೀಗ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಅತ್ಯಾಚಾರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಪತಿ ರೇವಣ್ಣನ ಜೊತೆಗೆ ಭವಾನಿ ರೇವಣ್ಣ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಈ ಕುರಿತಾಗಿ ಎಸ್ಐಟಿ ತನಿಖೆಗೆ ಹಾಜರಾಗಬೇಕು ಎಂದು ಹೇಳಿತ್ತು. ಆದರೆ ಭವಾನಿ ರೇವಣ್ಣ ತನಿಖೆ ಹಾಜರಾಗದೆ ಕಣ್ತಪ್ಪಿಸಿದ್ದರು. ಕೊನೆಗೆ ಕೋರ್ಟ್ ಮದ್ಯಂತರ ಜಾಮೀನು ನೀಡಿತ್ತು.
ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದೇ ತಡ ಭವಾನಿ ರೇವಣ್ಣ ಪ್ರತ್ಯಕ್ಷವಾಗಿ ಎಸ್ಐಟಿ ತನಿಖೆಗೆ ಹಾಜರಾಗಿದ್ದರು. ಮಾತ್ರವಲ್ಲದೆ, ಎಸ್ಐಟಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆದರೀಗ ಹೈಕೋರ್ಟ್ ಅತ್ಯಾಚಾರ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡಿದೆ. ಇದರಿಂದ ಭವಾನಿ ರೇವಣ್ಣ ನಿಟ್ಟುಸಿರು ಬಿಡುವಂತಾಗಿದೆ.