ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿಟ್ಲ ಇದರ ವಿಟ್ಲ ಎ ಮತ್ತು ಶಿವಾಜಿನಗರ ಒಕ್ಕೂಟ ವತಿಯಿಂದ ವಿಶ್ವ ತಂಬಾಕು ದಿನ ಪ್ರಯುಕ್ತ ವ್ಯಸನ ಮುಕ್ತ ಸಮಾಜ ಇದರ ಬಗ್ಗೆ ಮಾಹಿತಿ ಶಿಬಿರವು ವಿಟ್ಲ ವಲಯ ಅಧ್ಯಕ್ಷರಾದ ಪ್ರಮೀಳಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ನವೀನ್ ಕುಮಾರ್ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಮತ್ತು ಸಮಾಜದಲ್ಲಿ ಗೌರವದಿಂದ ಬದುಕಲು ವ್ಯಸನಕ್ಕೆ ಬಲಿಯಾಗಬಾರದು ಇದರಿಂದ ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಮಾಹಿತಿ ನೀಡಿದರು.
ವಿಟ್ಲ ವಲಯ ಮೇಲ್ವಿಚಾರಕರಾದ ಸರಿತಾ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವಿಟ್ಲ ಈ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ಮತ್ತು ಶಿವಾಜಿನಗರ ಒಕ್ಕೂಟದ ಅಧ್ಯಕ್ಷರಾದ ಗೋಪಾಲ ನಾಯಕ ಸೇವಾ ಪ್ರತಿನಿಧಿಗಳಾದ ಭವ್ಯ ಮತ್ತು ಆಶಾ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.