ಪುತ್ತೂರು : ತುಳು ಚಲನಚಿತ್ರಗಳಲ್ಲಿ ನಾಯಕಿಯ ಪಾತ್ರ ಮಾಡಿ ಮೆಚ್ಚುಗೆ ಗಳಿಸಿರುವ ಪುತ್ತೂರಿನ ಚೆಲುವೆ ರಚನಾ ರೈ ಅವರಿಗೆ ‘ಉತ್ತಮ ತುಳು ಚಲನಚಿತ್ರ ನಟಿ’ ಕೋಸ್ಟಲ್ ಫಿಲ್ಮ್ ಅವಾರ್ಡ್ ಲಭಿಸಿದೆ.
ಜೂ.16ರಂದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಗಣ್ಯರು, ತುಳು ಚಲನಚಿತ್ರರಂಗದ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು, ಗಾಯಕರು, ತಾಂತ್ರಿಕ ವರ್ಗದವರೆಲ್ಲರ ಉಪಸ್ಥಿತಿಯಲ್ಲಿ ನೃತ್ಯ ಮನೋರಂಜನೆ, ಸಂಗೀತ ಮುಂತಾದ ಸಾಂಸ್ಕೃತಿಕ ಸಭಾ ಕಾರ್ಯಕ್ರಮದೊಂದಿಗೆ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ 2024ರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಉತ್ತಮ ತುಳು ಚಲನಚಿತ್ರ ನಟಿ’ ಪ್ರಶಸ್ತಿಯನ್ನು ‘ಸರ್ಕಸ್’ ಚಲನಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಪುತ್ತೂರಿನ ರಚನಾ ರೈ ಸ್ವೀಕರಿಸಿದರು.
ರಚನಾ ರೈ ಪುತ್ತೂರು ಹಾರಾಡಿ ಶಾಲಾ ಶಿಕ್ಷಕಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿರುವ ಗಂಗಾ ರೈ ಅವರ ಪುತ್ರಿ.
ರಚನಾ ರೈ ಅವರು ಎಲ್ ಕೆಜಿಯಿಂದ ಪಿಯುಸಿ ತನಕ ಎಸ್‌ಡಿಎಮ್ ಉಜಿರೆಯಲ್ಲಿ ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಜರ್ನಲಿಸಮ್ ಮಾಡಿದ್ದಾರೆ. ಈ ನಡುವೆ ಅವರು ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತುಳುಚಿತ್ರ ‘ಸರ್ಕಸ್’ ನಲ್ಲಿ ನಾಯಕಿಯಾಗಿ ಪಾತ್ರ ಮಾಡಿದ್ದಾರೆ.
ಕನ್ನಡ ಚಲನಚಿತ್ರದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ರಚನಾ, ಬ್ಯಾಡ್ಮಿಂಟನ್ ಪ್ಲೇಯರ್, ಮಾಡೆಲ್, ಡ್ಯಾನ್ಸರ್ ಹಾಗೆಯೇ ಬರಹಗಾರ್ತಿ ಕೂಡಾ ಆಗಿರುವ ಇವರು ಓ ಮೈ ಡಾಗ್ ಎಂಬ ಪುಸ್ತಕ ಬರೆದಿದ್ದಾರೆ.