ಪುತ್ತೂರು : ಮನೆಯೊಂದರಲ್ಲಿ ಫ್ರಿಜ್ (ರೆಫ್ರಿಜರೇಟರ್) ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ ಘಟನೆ ಜಿಡೆಕಲ್ಲು ಕಾಲೇಜು ಸಮೀಪ ನಿನ್ನೆ ನಡೆದಿದ್ದು, ಘಟನಾ ಸ್ಥಳಕ್ಕೆ ನಿನ್ನೆ ಅರುಣ್ ಕುಮಾರ್ ಪುತ್ತಿಲ ಹಾಗೂ ಇಂದು ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.

ಜಿಡೆಕಲ್ಲು ಕಾಲೇಜು ಸಮೀಪದ ಮೋನಪ್ಪ ಎಂಬವರ ಮನೆಯಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಿಂದಾಗಿ ಮನೆಗೆ ಸಂಪೂರ್ಣ ಹಾನಿಯುಂಟಾಗಿದೆ.
