ಹಾಸನ : ಹೃದಯ ಭಾಗದಲ್ಲಿರುವ ಹೊಯ್ಸಳ ನಗರದಲ್ಲಿ ಭಯಾನಕ ಗುಂಡಿನ ದಾಳಿ ನಡೆದಿದೆ. ಅಪರಿಚಿತರು ಶೂಟೌಟ್ ಮಾಡಿದ್ದು, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಹಾಡಹಗಲೇ ಹೊಯ್ಸಳ ನಗರದಲ್ಲಿ ಗನ್ ಸದ್ದು ಮಾಡಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಗುಂಡು ಹಾರಿಸಿ ಇಬ್ಬರನ್ನು ಹತ್ಯೆಗೈದು ಹಂತಕರು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶೂಟೌಟ್ ಆದ ಜಾಗಕ್ಕೆ ಹಾಸನ ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರು ಸ್ಥಳದಿಂದ ಎಸ್ಕೇಪ್ ಆಗಿದ್ದು, ಗುಂಡಿಗೆ ಬಲಿಯಾದ ಯುವಕರು ಯಾರು ಅನ್ನೋ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.


























