ಬೆಂಗಳೂರು : ಮಗುವಿನ ಮೇಲೆ ಮಲತಂದೆ ಮೃಗೀಯ ರೀತಿಯ ವರ್ತನೆಗೈದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
3 ವರ್ಷದ ಮಗುವಿಗೆ ಸಿಗರೇಟ್ ನಿಂದ ಸುಟ್ಟು ಕ್ರೌರ್ಯ ಮೆರೆದಿದ್ದಾನೆ. ಮಲ ತಂದೆ ಅಜ್ಮಂತ್ ಎಂಬಾತ ಮಗುವಿನ ಮೇಲೆ ಕೃತ್ಯವೆಸಗಿದ್ದಾನೆ. ಮಗುವಿನ ತಾಯಿ ಜರೀನಾ ತಾಜ್ ಮೇಲೆಯೂ ಚಿತ್ರಹಿಂಸೆ ಕೊಟ್ಟಿರುವ ಆರೋಪ ಕೇಳಿಬಂದಿದೆ.
ಮಲತಂದೆ ಅಜ್ಮಂತ್ ಕೌರ್ಯದ ಪರಿಣಾಮ ಮಗುವಿನ ಮುಖ, ಕತ್ತು, ತಲೆ ಭಾಗ ಸುಟ್ಟು ಹೋಗಿದೆ. ಕೈ ಕಾಲುಗಳ ಮೇಲೆ ಚಿತ್ರ ಹಿಂಸೆ ನೀಡಿದ್ದಲ್ಲದೆ, ಕಾಲು ಕತ್ತರಿಸಿಹೋಗಿದೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
3ನೇ ಪತಿಯಿಂದ ಈ ಕ್ರೌರ್ಯ
ತಾಯಿ ಜರೀನಾ ತಾಜ್ ಈಗಾಗಲೇ 3 ಮದುವೆಯಾಗಿದ್ರಂತೆ. ಮೊದಲ ಪತಿಯಿಂದ ಎರಡು ಹೆಣ್ಣು ಮಕ್ಕಳು ಪಡೆದಿದ್ದರು. ಎರಡನೇ ಪತಿಯಿಂದ ಸಹ ಒಂದು ಹೆಣ್ಣು ಮಗು ಪಡೆದಿದ್ದರು. ಆ ಬಳಿಕ ಜರೀನಾ ಅಜ್ಮಂತ್ ಜೊತೆ 3ನೇ ಮದ್ವೆಯಾಗಿದ್ದಾರೆ.
2ನೇ ಪತಿಯ ಮಗುವಿಗೆ ಚಿತ್ರ ಹಿಂಸೆ ನೀಡಿರುವ ಆರೋಪ ಅಜ್ಮಂತ್ ಮೇಲೆ ಕೇಳಿಬಂದಿದೆ. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.


























