ಪುಣೆ : ಯುವತಿಯೊಬ್ಬಳು ಅಪಾಯಕಾರಿ ಸಾಹಸ ಪ್ರದರ್ಶಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಣೆಯ ಸ್ವಾಮಿ ನಾರಾಯಣ ದೇವಸ್ಥಾನದ ಬಳಿಯಿರುವ ಪಾಳು ಬಿದ್ದ ಬಹು ಮಹಡಿಯ ಕಟ್ಟಡದಲ್ಲಿ ಚಿತ್ರೀಕರಿಸಲಾಗಿದ್ದು, ಯುವಕನೊಬ್ಬನ ಕೈ ಹಿಡಿದು ಯುವತಿ ನೇತಾಡುತ್ತಿರುವುದನ್ನು ಕಾಣಬಹುದು.
ರೀಲ್ಸ್ ಗಾಗಿ ಯುವತಿ ಈ ರೀತಿಯ ಸ್ಟಂಟ್ ಮಾಡಿರುವುದು ತಿಳಿದುಬಂದಿದೆ. ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಹಸದಲ್ಲಿ ತೊಡಗಿರುವಾಗ ಆಕೆ ಕ್ಯಾಮರಾದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದುದಾಗಿದೆ.
ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವೀಡಿಯೋ ವೈರಲ್ ಆಗುತ್ತಿದೆ. ವೈರಲ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೀಡಿಯೋದಲ್ಲಿ ಯುವತಿ ಯುವಕನೊಬ್ಬನ ಕೈ ಹಿಡಿದು ಬಹು ಮಹಡಿಯ ಕಟ್ಟಡದಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು.
ರೀಲ್ಸ್ಗಾಗಿ ಯುವತಿ ಈ ರೀತಿಯ ಸ್ಟಂಟ್ ಮಾಡುವುದನ್ನು ಕಂಡು ಸಾಕಷ್ಟು ನೆಟ್ಟಿಗರು ಖಂಡಿಸಿದ್ದಾರೆ. ಯುವತಿಯ ರೀಲ್ಸ್ ಹುಚ್ಚು ಪ್ರಾಣಕ್ಕೆ ಕಂಟಕವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸ್ಥಳೀಯ ಪೊಲೀಸರು ತಕ್ಷಣ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.


























