ವಿಟ್ಲ : ವಿಶ್ವಯೋಗ ದಿನಾಚರಣೆಯನ್ನು ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ)ವಿಟ್ಲದಲ್ಲಿ ಆಚರಿಸಲಾಯಿತು.

ಉದ್ಘಾಟಣಾ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಕೌನ್ಸಿಲರ್ ರವಿಪ್ರಕಾಶ್ ವಿಟ್ಲ ನೆರವೇರಿಸಿದರು.

ಶಾಲಾ ಎಸ್.ಡಿ.ಎಂ.ಸಿ ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷರಾದ ಮಂಜುನಾಥ ಪೈ ಯೋಗದ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಾದ ರವಿಶಂಕರ್ ಸಿ., ಶಾರದಾ, ಪ್ರಾಥಮಿಕ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೆ.ಎಸ್.ಡಿ.ಎಂ.ಸಿ ಸದಸ್ಯರಾದ ರಶ್ಮೀ ಹರೀಶ್ ದೈಹಿಕ ಶಿಕ್ಷಕರಾದ ವಿದ್ಯಾಶಂಕರ್ ಡಿ. ಯೋಗಾಭ್ಯಾಸ ಮಾಡಿಸಿದರು.

ಯೋಗಾಭ್ಯಾಸವು ಸೂರ್ಯ ನಮಸ್ಕಾರದೊಂದಿಗೆ ಪ್ರಾರಂಭವಾಗಿ ಧ್ಯಾನ, ವಿವಿಧ ಆಸನಗಳನ್ನು ಮಾಡಿಸಲಾಯಿತು. ಶಿಕ್ಷಕವೃಂದ, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರುಗಳನ್ನು ಒಳಗೊಂಡ ಕಾರ್ಯಕ್ರಮ ಅತ್ಯಂತ ಸಂತಸದಾಯಕವಾಗಿತ್ತು. ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಫೆಲ್ಸಿಟಾ ಈವಾ ಗಲ್ಬಾವೊ ಸ್ವಾಗತಿಸಿದರು. ಪ್ರೌಢಶಾಲಾ ಸಹಶಿಕ್ಷಕರಾದ ಸದಾಶಿವ ನಾಯಕ್ ಕಾರ್ಯಕ್ರಮ ನಿರೂಪಿಸಿ, ದಯಾನಂದ ಯನ್, ವಂದಿಸಿದರು.

























