ಕಡಬ : ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಎರಡು ತಂಡದವರು ದೂರು-ಪ್ರತಿದೂರು ನೀಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಬಿಳಿನೆಲೆ ನಿವಾಸಿ ಚಂದ್ರಶೇಖರ ರವರು ಜೂ.20 ರಂದು ರಾತ್ರಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಆಟೋರಿಕ್ಷಾದಲ್ಲಿ ತೆರಳುತ್ತಿರುವಾಗ ಬಿಳಿನೆಲೆ ಗ್ರಾಮದ ಹಾಲಿನ ಸೊಸೈಟಿ ಬಳಿ ಆಟೋರಿಕ್ಷಾವನ್ನು ನಿಲ್ಲಿಸಿ ಪೋನ್ನಲ್ಲಿ ಮಾತನಾಡುತ್ತಿದ್ದು, ಈ ವೇಳೆ ಮನೋಜ್ ಎಂಬಾತ ಆಟೋರಿಕ್ಷಾದ ಬಳಿ ಬಂದು ಚಂದ್ರಶೇಖರ ರವರ ಹೆಂಡತಿಯು ಮನೋಜ್ ತಾಯಿಗೆ ಅವ್ಯಾಚವಾಗಿ ಬೈದಿರುತ್ತಾರೆ ಎಂದು ಆರೋಪಿಸಿ, ಚಂದ್ರಶೇಖರ ರವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:70/2024.ಕಲಂ:323.324.504 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಪ್ರತಿದೂರು ನೀಡಿದ್ದು, ಚಂದ್ರಶೇಖರ್ ತನಗೆ ಕೈಯಿಂದ ಹಾಗೂ ಬೆಲ್ಟ್ ನಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ಪ್ರತಿದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:71/2024.ಕಲಂ:323.324.504 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ರಿ ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.