ಮಂಗಳೂರು : ಕಾರ್ ಪೋರ್ಚ್‌ನಲ್ಲಿ ನಿಲ್ಲಿಸಿದ್ದ ವಿಟಾರಾ ಕಾರಿಗೆ ಬೆಂಕಿ ತಗುಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯಾಗಿರುವ ಘಟನೆ ಬೊಂದೇಲ್ ನಲ್ಲಿ ನಡೆದಿದೆ.

ವಾಹನಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ಪಾದಾಚಾರಿಗಳು ಸ್ಥಳೀಯ ನಿವಾಸಿಗಳಿಗೆ ಈ ಬಗ್ಗೆ ತಿಳಿಸಿದ್ದು, ಅವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಆದರೆ ಬೆಂಕಿ ವೇಗವಾಗಿ ಹರಡಿದ ಹಿನ್ನಲೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು.
ತೀವ್ರವಾದ ಶಾಖ ಮತ್ತು ಬೆಂಕಿಯಿಂದಾಗಿ ಕಾರ್ ಪಾರ್ಕಿಂಗ್ ಮತ್ತು ಮೂರು ಅಂತಸ್ತಿನ ಕಟ್ಟಡದ ಪ್ರವೇಶದ್ವಾರಕ್ಕೆ ಹಾನಿಯಾಗಿದೆ.

























