ಕಾಸರಗೋಡು : ಜೆಸಿಬಿ ಯಂತ್ರ ಮಗುಚಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬಂದಡ್ಕದಲ್ಲಿ ನಡೆದಿದೆ.
ಬಂದಡ್ಕದ ಪ್ರೀತಂ ಲಾಲ್ ಚಂದ್ (22) ಮೃತ ಯುವಕ.
ಲಾಲ್ ಚಂದ್ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ರವರ ಪುತ್ರ. ಅವರಿಗೆ ಸೇರಿದ ಜೆಸಿಬಿ ಯಂತ್ರ ತೊಳೆಯುತ್ತಿದ್ದಾಗ ಈ ಅವಘಡ ನಡೆದಿದೆ.
ಬಂದಡ್ಕ ಪಡುಪ್ಪುನಲ್ಲಿರುವ ಸಂಬಂಧಿಕರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಂಗಳದಲ್ಲಿ ಹಿಟಾಚಿ ತೊಳೆಯುತ್ತಿದ್ದಾಗ ಮಗುಚಿ ಬಿದ್ದಿದ್ದು, ಅದರಡಿ ಸಿಲುಕಿದ್ದ ಲಾಲ್ ಚಂದ್ ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಸಹೋದರ ಗೌತಮ್ ಲಾಲ್ ರವರ ಜೆಸಿಬಿ ಯಂತ್ರದಲ್ಲಿ ಸಹಾಯಕರಾಗಿ
ಕೆಲಸ ನಿರ್ವಹಿಸುತ್ತಿದ್ದನು.
ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


























