ವಿಟ್ಲ : ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಂಬಳಬೆಟ್ಟುವಿನಲ್ಲಿ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಶಾಲಾ ಮಕ್ಕಳಿಗೆ ಕ್ರೀಡಾ ಉಪಕರಣ ವಿತರಿಸಲಾಯಿತು.

ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್ ಶಾಲಾ ಮಕ್ಕಳಲ್ಲಿ ಕ್ರೀಡೆಯ ಜೊತೆಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಸಭೆಯಲ್ಲಿ ಪಂಚಾಯತ್ ನಿಕಟಪೂರ್ವ ಅದ್ಯಕ್ಷರಾದ ಜಯಪ್ರಕಾಶ್ ನಾಯಕ್, ಸದಸ್ಯರಾದ ಮಹಾಭಲೇಶ್ವರ್ ಭಟ್, ಲೋಕೇಶ್ ನಾಟೆಕಲ್ಲು, ಸಿದ್ದೀಕ್, ಸಾಬಿರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಜಯ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ರೆಹಿಮಾನ್, ಶಾಲಾ ಮುಖ್ಯೊಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.


























