ಪುತ್ತೂರು : ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯ ಇ-ಕಾಮರ್ಸ್ ವೀಡಿಯೋ ಶಾಪಿಂಗ್ ಉತ್ಸವ ದಿನಾಂಕ ಮೇ 29 ರಿಂದ ಜೂನ್ 29 ರವರೆಗೆ ನಡೆಯಲಿದೆ.
ಸದಾ ಹೊಸತನವನ್ನು ಮಾರುಕಟ್ಟೆಗೆ ಪರಿಚಯಿಸುವ ಮುಳಿಯ ಜ್ಯುವೆಲ್ಸ್ ಈ ಬಾರಿ ನಮ್ಮ ಊರಿನ ಆಭರಣಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ವಿಶೇಷ ಯೋಜನೆಯನ್ನು ಕಲ್ಪಿಸಿಕೊಟ್ಟಿದೆ.
ಇದಕ್ಕಾಗಿ ಗ್ರಾಹಕರು ಮುಳಿಯ ಜ್ಯುವೆಲ್ಸ್ನ ವೆಬ್‌ಸೈಟ್ www.browsemuliya.in ಗೆ ಭೇಟಿಕೊಟ್ಟು ನಿಮಗೆ ಇಷ್ಟವಾದ ಆಭರಣವನ್ನು ಆಯ್ಕೆ ಮಾಡಬಹುದು. ನಂತರ ಅದರಲ್ಲಿ ನೀಡಲಾದ ಮಾಹಿತಿಗೆ enquiry ಕಳುಹಿಸಬೇಕು. ನಂತರ ನಮ್ಮ ಸಿಬ್ಬಂದಿಗಳು ಆಭರಣಗಳನ್ನು ವೀಡಿಯೋ ಕಾಲ್ ಮುಖಾಂತರ ಪ್ರದರ್ಶಿಸುತ್ತಾರೆ. ನಂತರ ಗ್ರಾಹಕರು ತಮಗೆ ಇಷ್ಟವಾದ ಆಭರಣಗಳನ್ನು ಆಯ್ಕೆ ಮಾಡಬಹುದು.
ಗ್ರಾಹಕರ ಆಭರಣದ ಬಿಲ್ಲನ ಮೊಬಲಗುವನ್ನು ಆನ್‌ಲೈನ್ ಮುಖಾಂತರ ಪಾವತಿಸಬಹುದು. ಹೀಗೆ ಆಯ್ಕೆ ಮಾಡಿದ ಆಭರಣಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು.
ಸಂಸ್ಥೆಯ ಚೇರ್‌ಮ್ಯಾನ್ ಮತ್ತು ಆಡಳಿತ ನಿರ್ದೇಶಕರಾದ ಶ್ರೀ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ ಕೊರೋನಾ ಸಂದರ್ಭದಲ್ಲಿ ನಾವು ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಇದೇ ರೀತಿ ಗ್ರಾಹಕರು ಮನೆಯಲ್ಲಿ ಕುಳಿತು ಆಭರಣ ಖರೀದಿ ಮಾಡಲು ಮುಳಿಯ ಇ-ಕಾಮರ್ಸ್ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದರಿಂದ ಗ್ರಾಹಕರಿಗೆ ಅನೇಕ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದರು.
ಸoಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಆನ್‌ಲೈನ್ ಖರೀದಿ ಮಾಡುವುದು ರೂಢಿಯಾಗಿದೆ ಅದೇ ರೀತಿ ಈ ಸಮಯದಲ್ಲಿ ಅನೇಕ ಶುಭಸಮಾರಂಭಗಳಿವೆ. ಇದರಿಂದ ಗ್ರಾಹಕರಿಗೆ ನಮ್ಮೂರಿನ ಆಭರಣಗಳನ್ನು ಹೇಗೆ ಖರೀದಿ ಮಾಡುವುದು ಎಂದು ಚಿಂತೆಯಾಗಿದೆ. ಇದಕ್ಕೆ ನಮ್ಮ ಮುಳಿಯ ಇ-ಕಾಮರ್ಸ್ ತುಂಬಾ ಉಪಯುಕ್ತವಾಗಿದೆ ಎಂದರು.
ಈ ಕುರಿತಂತೆ ಮಾತನಾಡಿದ ಸಲಹೆಗಾರ ವೇಣುಶರ್ಮ ಇ-ಕಾಮರ್ಸ್ ಮೂಲಕ ಚಿನ್ನ ಖರೀದಿ ಬಹಳ ಸುಲಭ. ಸ್ಮಾರ್ಟ್ಫೋನ್ ಮೊಬೈಲ್ ಮೂಲಕ ಇದನ್ನು ಸುಲಭವಾಗಿ ಖರೀದಿಸಬಹುದು.
ಈ ಮುಳಿಯ ವೀಡಿಯೋ ಶಾಪಿಂಗ್‌ನ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 9353030916 ಅಥವಾ18004252916 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.