ಉಪ್ಪಿನಂಗಡಿ:-ಉಪ್ಪಿನಂಗಡಿ ಇಲ್ಲಿನ ಸರಕಾರಿ ಮಾದರಿ ಶಾಲೆಯ ಆವರಣದಲ್ಲಿ ಕಟ್ಟಡಗಳಿಗೆ ಹಾನಿಯಾಗುವಂತೆ ರಸ್ತೆ ಬದಿಯಲ್ಲಿ ಮರಗಳ ಗೆಲ್ಲುಗಳು ಶಾಲಾ ಹಂಚಿನ ಛಾವಣಿಗೆ ತಾಗಿಕೊಂಡಿದ್ದು ಗಾಳಿ-ಮಳೆಗೆ ಮರದ ಗೆಲ್ಲುಗಳು ಮುರಿದು ಶಾಲಾ ಛಾವಣಿಯ ಹಂಚುಗಳು ತುಂಡಾಗುವ ಸಾದ್ಯತೇ ಇರುವುದರಿಂದ ಹಾಗೂ ಅಪಾಯಕಾರಿ ರೀತಿಯಲ್ಲಿ ಮಾರ್ಗಕ್ಕೆ ವಾಲಿಕೊಂಡಿದ್ದ ಮರದ ಗೆಲ್ಲುಗಳನ್ನು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಉಪ್ಪಿನಂಗಡಿ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡ ಕಂದಾಯ ನಿರೀಕ್ಷಕರಾದ ವಿಜಯ್ ವಿಕ್ರಂ ಸೂಚನೆಯಂತೆ ಮರದ ಗೆಲ್ಲುಗಳನ್ನು ತೆರವುಗೊಳಿಸಿದರು.
ಮರದ ಗೆಲ್ಲುಗಳ ತೆರವು ಕಾರ್ಯದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,ಎ.ಎಸ್.ಎಲ್.ಜನಾರ್ಧನ ಆಚಾರ್ಯ, ಸೋಮನಾಥ್, ವಸಂತ,ಸಮದ್ ತಾಲೂಕು ಆಡಳಿತದ ಈಜುಗಾರರಾದ ಸುದರ್ಶನ್, ವಿಶ್ವನಾಥ್ ಶೆಟ್ಟಿಗಾರ್ ಭಾಗವಹಿಸಿದರು. ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಜೀದ್,ಲೈನ್ ಮ್ಯಾನ್ ಭೀಮಪ್ಪ, ಮಾಜಿ ಅಧ್ಯಕ್ಷ ಮೊಯೂದ್ದಿನ್ ಕುಟ್ಟಿ ಸಹಕರಿಸಿದರು.
ಜೂ.2 ರಂದು ಶಾಲಾ ಆಡಳಿತ ಮಂಡಳಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಪುತ್ತೂರು ತಹಶೀಲ್ದಾರ್ ಗೆ ಪತ್ರದ ಮುಖಾಂತರ ಮನವಿ ಸಲ್ಲಿಸಿತ್ತು.