ಕಾಸರಗೋಡು : ಭಾರೀ ಮಳೆ ಹಿನ್ನಲೆ ಮಂಗಳೂರು ಗಡಿಭಾಗ ಕಾಸರಗೋಡು ಜಿಲ್ಲೆಯಲ್ಲಿ ಕಾರೊಂದು ಹೊಳೆಗೆ ಬಿದ್ದ ಬಗ್ಗೆ ವರದಿಯಾಗಿದೆ.

ಕಾರಿನಲ್ಲಿದ್ದ ರಶೀದ್, ತಸ್ರೀಫ್ ಎಂಬವರನ್ನು ರಕ್ಷಣೆ ಮಾಡಲಾಗಿದ್ದು, ಕಾರು ನೀರುಪಾಲಾಗಿದೆ.

ತಡೆಬೇಲಿ ಇಲ್ಲದ ಕಾರಣ ಕಾರು ಸೇತುವೆಯಿಂದ ಹೊಳೆಗೆ ಬಿದ್ದಿದ್ದು, ಕಾಸರಗೋಡು ಜಿಲ್ಲೆಯ ಪಳ್ಳಂಜಿ-ಪಾಂಡ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ಭಾರೀ ಮಳೆ ಹಿನ್ನಲೆ ಹೊಳೆ ತುಂಬಿ ಹರಿಯುತ್ತಿದ್ದು, ಮರವನ್ನು ಹಿಡಿದುಕೊಂಡು ಇಬ್ಬರು ಜೀವ ಉಳಿಸಿಕೊಂಡಿದ್ದಾರೆ.

























