ವಿಟ್ಲ : ಮನೆಯ ಟೆರೇಸ್ ಬಾಗಿಲನ್ನು ಮುರಿದ ಕಳ್ಳರು ಮನೆಯ ಒಳ ಪ್ರವೇಶಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ದೋಚಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಂತೂರು ನಿವಾಸಿ ಮಹಿಳೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮೇ.21 ರಾತ್ರಿಯಿಂದ ಮೇ.26ರ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿರುವ ಮಹಿಳೆಯ ಮನೆಯ ಟೇರೀಸ್ ನ ಬಾಗಿಲನ್ನು ಯಾರೋ ಕಳ್ಳರೂ ಮುರಿದು, ಮನೆಯ ಒಳಗೆ ಒಳಪ್ರವೇಶಿಸಿ, ರೂಮನಲ್ಲಿದ್ದ ಗೊಡ್ರೇಜ್ ನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ಅದರೊಳಗಿದ್ದ, ಒಟ್ಟು 52 ಗ್ರಾಂ ಚಿನ್ನದ ಆಭರಣಗಳನ್ನು ಹಾಗೂ ವಿದೇಶದಿಂದ ಮಹಿಳೆಯ ಮಗ ತಂದು ಗೊಡ್ರೆಜ್ನಲ್ಲಿಟ್ಟಿದ್ದ 5000/- ಸೌದಿಯ ರಿಯಲ್ಸ್ ಕರೆನ್ಸಿ (ಭಾರತದ ಮೌಲ್ಯ 1,15,000/-)ಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 3,20,000/- ರೂ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 112/2024 ಕಲಂ: 454,457,380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























