ಪುತ್ತೂರು : ಅಶೋಕ್ ರೈಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದ್ದು ಪ್ರತೀ ರಂಗದಲ್ಲೂ ಇದನ್ನು ಕಾಣಲು ಸಾಧ್ಯವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.

ಅವರು ಪುತ್ತೂರು- ಕೌಡಿಚ್ಚಾರ್ ಸಿಟಿ ಬಸ್ ವ್ಯವಸ್ಥೆಗೆ ಕೌಡಿಚ್ಚಾರ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೌಡಿಚ್ಚಾರ್‌ಗೆ ಸಿಟಿ ಬಸ್ ವ್ಯವಸ್ಥೆ ಆಗಬೇಕು. ಇಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕರಿಗೆ ತಿಳಿಸಿ ಸಿಟಿ ಬಸ್ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೆಲದಿನಗಳ ಹಿಂದೆ ಮನವಿ ಮಾಡಿದ್ದೆವು ಮನವಿಯನ್ನು ಪುರಸ್ಕರಿಸಿದ ಶಾಸಕರು ಕೆಲವೇ ದಿನಗಳಲ್ಲಿ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ ಇದಕ್ಕಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಪುತ್ತೂರು ಕ್ಷೇತ್ರಕ್ಕೆ ಈಗಾಗಲೇ ಶಾಸಕರು 1500 ಕೋಟಿ ರೂ ಅನುದಾನವನ್ನು ತಂದಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಸಕರು ಬಡವರ ಬಂಧುವಾಗಿ ಪ್ರಸಿದ್ದಿಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದ ಕೌಡಿಚ್ಚಾರ್‌ಗೆ ಸಿಟಿ ಬಸ್ ಬೇಕು ಎಂಬ ಬೇಡಿಕೆ ಇತ್ತು ಅದನ್ನು ಈಡೇರಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.
ಕೌಡಿಚ್ಚಾರ್‌ಗೆ ಸಿಟಿ ಬಸ್ ವ್ಯವಸ್ಥೆಯಾಗಲು ನಾವು ಕಾರಣ ಎಂದು ಕೆಲವರು ವ್ಯಾಟ್ಸಪ್‌ನಲ್ಲಿ ಹಾಕಿದ್ದನ್ನು ನಾನು ನೋಡಿದ್ದೇನೆ. ಯಾರೋ ಮಾಡಿದ ಕೆಲಸವನ್ನು ನಾವೇ ಮಾಡಿದ್ದು ಎಂದು ಹೇಳಲು ನಾಚಿಕೆಯಿಲ್ಲದ, ಮಾನ ಮರ್ಯಾದೆ ಇಲ್ಲದ ಕೆಲವರು ಈ ರೀತಿಯ ಪೋಸ್ಟ್‌ಗಳನ್ನು ಹಾಕಿದ್ದಾರೆ. ಯಾರದೋ ಮಗುವಿಗೆ ಅಪ್ಪನಾಗಲು ಹೋಗಬೇಡಿ. ಅರಿಯಡ್ಕ ಗ್ರಾಪಂ ನವರಿಗೆ ಸಿಟಿ ಬಸ್ ವ್ಯವಸ್ಥೆ ಮಾಡಲು ಈ ಹಿಂದೆ ಯಾಕೆ ಸಾಧ್ಯವಾಗಿಲ್ಲ, ಎಲ್ಲವೂ ನಿಮ್ಮದೇ ಕೈಯ್ಯಲ್ಲಿದ್ದಾಗ ಮಾಡಲು ಯಾಕೆ ಸಾಧ್ಯವಾಗಿಲ್ಲ, ಈಗ ಕಾಂಗ್ರೆಸ್ ಶಾಸಕರಿದ್ದಾರೆ, ಕಾಂಗ್ರೆಸ್ ಸರಕಾರ ಇದೆ ನಾವು ಮಾಡಿದ ಕೆಲಸವನ್ನು ಬೆಂಬಲಿಸಿ ಅದನ್ನು ಬಿಟ್ಟು ಜನರಿಗೆ ತಪ್ಪು ಮಾಹಿತಿ ನೀಡಿ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದರು.
ಅಮ್ಚಿಡನ್ಕದವರೆಗೂ ಶೀಘ್ರವೇ ಸಿಟಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ಶಾಸಕರಿದ್ದಲ್ಲಿ ಎಲ್ಲ ಕೆಲಸಗಳೂ ಆಗುತ್ತದೆ ಎಂಬ ನಂಬಿಕೆ ಜನ ಸಾಮಾನ್ಯರಲ್ಲಿ ಇದೆ. ನಾವು ಬಡವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸುಳ್ಳವರು ನಾವು ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಜಾಯಾಮಾನದವರಲ್ಲ ನಾವು ಎಂದೆಂದೂ ಅಭಿವೃದ್ದಿ ಪರವಾಗಿಯೇ ಇರುವವರು ಎಂದು ತಿಳಿಸಿದರು.
ಬಸ್ ಕೌಡಿಚ್ಚಾರ್ ತಲುಪುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಸ್ಸಿಗೆ ಹೂವಿನ ಹಾರ ಹಾಕಿದರು. ತೆಂಗಿನ ಕಾಯಿ ಒಡೆಯುವ ಮೂಲಕ ಸ್ವಾಗತ ಮಾಡಿದರು. ಕೌಡಿಚ್ಚಾರ್‌ನಿಂದ ಶೇಖಮಲೆ ತನಕ ಬಸ್ಸಿನಲ್ಲಿ ಟಿಕೆಟ್ ನೀಡಿ ಪ್ರಯಾಣ ಮಾಡಿದರು. ಬಸ್ಸಿನಲ್ಲಿದ್ದವರು ಶಾಸಕರಿಗೆ ಹಾಗೂ ಕಾಂಗ್ರೆಸ್ ನಾಯಕರುಗಳಿಗೆ ಜೈಕಾರ ಘೋಷಣೆ ಕೂಗಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗ್ರಾಪಂ ಸದಸ್ಯೆ ಜಯಂತಿ ಪಟ್ಟುಮೂಲೆ, ವಿನುತಾ, ಒಳಮೊಗ್ರು ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ್, ಕಾಂಗ್ರೆಸ್ ಮುಖಂಡರುಗಳಾದ ರಾಜೀವ ರೈ ಕುತ್ಯಾಡಿ, ಶಿವರಾಮ ಮಣಿಯಾಣಿ, ಚಂಧ್ರಶೇಖರ ಮಣಿಯಾಣಿ ಕುರಿಂಜ, ಸುಂದರ ಮುಂಡಕೊಚ್ಚಿ, ರವಿಮುಂಡಕೊಚ್ಚಿ, ಶೀನಪ್ಪ ಮುಂಡಕೊಚ್ಚಿ, ಬಶೀರ್ ಕೌಡಿಚ್ಚಾರ್, ಮಹಮ್ಮದ್ ಬೊಳ್ಳಾಡಿ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ವಿಠಲ್ ನಾಯ್ಕ್ ಬಳ್ಳಿಕಾನ, ಗಂಗಾಧರ ಪಾಠಾಳಿ ಪಟ್ಟುಮೂಲೆ, ಅನ್ನಪೂರ್ಣಿಮಾ ರೈ ಕುತ್ಯಾಡಿ,ಹನೀಫ್ ಶೇಕಮಲೆ, ರಫೀಕ್ ದರ್ಖಾಸು, ಕೇಶವ ಶೇಕಮಲೆ,ರವಿ ಜಾರತ್ತಾರು, ಶಿವರಾಮ ಮಣಿಯಾಣಿ ಪೊನ್ನತ್ತಲಕ,ಇಸ್ಮಾಯಿಲ್ ಹೊಸಗದ್ದೆ, ಬದ್ರು ಪರ್ಪುಂಜ, ಜೀವನ್ ಕುರಿಂಜ, ಚಂದ್ರ ಮಣಿಯಾಣಿ ಕುಂಟಾಪುಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಅಶೋಕ್ ಪೂಜಾರಿ ಬೊಳ್ಳಾಡಿ ಮೊದಲಾದವರು ಉಪಸ್ಥಿತರಿದ್ದರು.


























