ಇತ್ತೀಚಿನ ದಿನಗಳಲ್ಲಿ ಎಲ್ಲರು ಹೆಚ್ಚಾಗಿ ಗೂಗಲ್ ಮೇಲೆ ಅವಲಂಬಿತರಾಗಿರುವುದು ಸಾಮಾನ್ಯ., ಏನನ್ನಾದರು ಹುಡುಕಲು, ಯಾವುದಾದರೂ ಪದಗಳ ಅರ್ಥ ತಿಳಿಯಲು ಅಥವಾ ಇನ್ನಿತರ ವಿಷಯಗಳಿಗಾಗಿ ಎಲ್ಲರು ಹೆಚ್ಚಾಗಿ ಗೂಗಲ್ ಮೇಲೆಯೇ ಡಿಪೆಂಡ್ ಆಗಿರುತ್ತಾರೆ. ಅದೇ ಗೂಗಲ್ ನಲ್ಲಿ ಇದೀಗ ಕರಾವಳಿಗರ ಮಾತೃಭಾಷೆ ತುಳುವಿನಲ್ಲಿಯೂ ಪದಗಳ ಟ್ರಾನ್ಸ್ಲೇಟ್ ಮಾಡಬಹುದಾಗಿದೆ.
ಹೌದು.., ಗೂಗಲ್ ಟ್ರಾನ್ಸ್ಲೇಟ್ ನಲ್ಲಿ ತುಳುಭಾಷೆ ಕೂಡ ಇದ್ದು, ಇನ್ಮುಂದೆ ಇಂಗ್ಲೀಷ್ ಪದಗಳ ಅರ್ಥವನ್ನು ತುಳುವಿನಲ್ಲಿಯೂ ಕಾಣಬಹುದಾಗಿದೆ.

ಮೊದಲೆಲ್ಲ ಇಂಗ್ಲೀಷ್ ನಿಂದ ಕನ್ನಡ, ಹಿಂದಿ ಅಥವಾ ಮಲಯಾಳಂ ಹೀಗೆ ಬೇರೆ ಭಾಷೆಗಳಿಗೆ ಮಾತ್ರ ಟ್ರಾನ್ಸ್ಲೇಟ್ ಮಾಡಬಹುದಾಗಿತ್ತು. ಇದೀಗ ಗೂಗಲ್ ಟ್ರಾನ್ಸ್ಲೇಟ್ ನಲ್ಲಿ ತುಳುಭಾಷೆ ಕೂಡ ಇದ್ದು, ತುಳುವರಿಗೆ ಸಂತಸದ ವಿಚಾರವೊಂದು ಸಿಕ್ಕಿದಂತಾಗಿದೆ.
ಇನ್ಮುಂದೆ ಮಕ್ಕಳಿಗೂ ಇಂಗ್ಲಿಷ್ ನಲ್ಲಿ ಬರುವ ಕೆಲ ಶಬ್ಧಗಳು ಹಾಗೂ ವಿಚಾರಗಳಿಗೆ ತುಳುವಿನಲ್ಲಿ ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಗೂಗಲ್ ಟ್ರಾನ್ಸ್ಲೇಟ್ ನಲ್ಲಿ ತುಳುಭಾಷೆ ಇರುವುದು ಸುಲಭವಾಗಲಿದೆ.