ಪುತ್ತೂರು : ರಸ್ತೆ ಸಮೀಪದ ಧರೆ ಕುಸಿದ ಘಟನೆ ಅಜೇಯನಗರ ರಸ್ತೆ ಪಡ್ನೂರು 3ನೇ ವಾರ್ಡ್ ನಲ್ಲಿ ನಡೆದಿದೆ.

ರಸ್ತೆ ಸಮೀಪದಲ್ಲಿರುವ ಖಾಸಗಿ ಜಾಗದವರು ಅವರ ಸ್ಥಳದಲ್ಲಿ ಕೆಲಸ ಮಾಡುವ ವೇಳೆ ರಸ್ತೆಯಂಚಿನವರೆಗೂ ಮಣ್ಣು ಅಗೆದಿದ್ದು, ಪರಿಣಾಮವಾಗಿ ವಿಪರೀತ ಮಳೆಗೆ ಮಣ್ಣು ಸಡಿಲಗೊಂಡು ಧರೆ ಕುಸಿದಿದೆನ್ನಲಾಗಿದೆ.
ಘಟನೆಯಿಂದಾಗಿ ಆ ಭಾಗದಲ್ಲಿ ಓಡಾಡುವ ವಾಹನ ಸವಾರರರಿಗೂ ಸಂಕಷ್ಟ ಎದುರಾಗಿದೆ.
ಸ್ಥಳಕ್ಕೆ ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.


























