ಪುತ್ತೂರು : ಹಳೆ ವೈಷಮ್ಯ ಹಿನ್ನಲೆ ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಳಮೊಗ್ರು ಉಳಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನ ಮೇರೆಗೆ ನಾಶೀರ್, ಇರ್ಷಾದ್, ಸಫ್ವಾನ್, ಮುಸ್ತಫಾ, ರಶೀದ್, ಜಾಫರ್, ಕಬೀರ್, ನಾಶೀರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಹಿಮಾನ್ ಜೂ.30 ರಂದು ರಾತ್ರಿ ತಮ್ಮ ಇಬ್ರಾಹಿಂ ಕಲೀಲ್ ರವರ ಸ್ಕೂಟರಿನಲ್ಲಿ, ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ಎಂಬಲ್ಲಿ ತೆರಳುತ್ತಿದ್ದಾಗ ಸ್ಕೂಟರನ್ನು ನಾಶೀರ್, ಇರ್ಷಾದ್, ಸಫ್ವಾನ್, ಮುಸ್ತಾಫ, ರಶೀದ್, ಜಾಫರ್, ಕಬೀರ್ ಮತ್ತು ನಾಶೀರ್ ಎಂಬವರು ತಡೆದು ನಿಲ್ಲಿಸಿ, ಬೈದು, ದೂಡಿ ಹಾಕಿ ಬಳಿಕ ಎಲ್ಲರು ಗುಂಪು ಸೇರಿ ಹಲ್ಲೆ ನಡೆಸಿದ್ದು, ಸದ್ರಿ ಹಲ್ಲೆಗೆ ಹಳೆಯ ವೈಷಮ್ಯ ಕಾರಣವೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 78-2024 ಕಲಂ 341,143,144,146,147,148,323,324 R/W 149 ಐಪಿಸಿರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























