ನವದೆಹಲಿ : ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯವರು ತಮ್ಮ ಮೊದಲ ಭಾಷಣ ಮಾಡಿದ್ರು. ಮೊದಲ ಭಾಷಣದಲ್ಲೇ ಹಿಂದೂ ಎಂದು ಹೇಳಿಕೊಳ್ಳುವವರೇ ಹಿಂಸೆ ಬಗ್ಗೆ ಮಾತಾಡ್ತಾರೆ ಎಂದು ಬಿಜೆಪಿಯನ್ನು ಟಾರ್ಗೆಟ್ ಮಾಡಿ ಮಾತಾಡಿದರು.
ನಮ್ಮ ಹಿರಿಯರು ಅಹಿಂಸೆ ಬಗ್ಗೆ ಮಾತಾಡಿದ್ದಾರೆ. ಆದರೆ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಹಲವರು ಕೇವಲ ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತಾಡುತ್ತಾರೆ. ಅವರು ಯಾವುದೇ ರೀತಿ ಹಿಂದೂ ಅಲ್ಲ ಎಂದು ಕಿಡಿಕಾರಿದ್ರು.
ಇನ್ನು, ರಾಹುಲ್ ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಅತ್ಯಂತ ಗಂಭೀರ ಎಂಬ ಆರೋಪವನ್ನು ಪ್ರಧಾನಿ ಮೋದಿ ಎಸಗಿದ್ರು. ಇದಕ್ಕೂ ಉತ್ತರ ನೀಡಿದ ರಾಹುಲ್, ಮೋದಿ, ಬಿಜೆಪಿ-ಆರ್ಎಸ್ಎಸ್ ಮಾತ್ರು ಹಿಂದೂ ಸಮುದಾಯವಲ್ಲ ಎಂದು ಮೋದಿಗೆ ತಿರುಗೇಟು ನೀಡಿದರು.
ಮತ್ತೊಂದೆಡೆ ತಮ್ಮ ವಿವಾದಾತ್ಮಕ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಪಟ್ಟು ಹಿಡಿದ್ರು. ಈ ದೇಶದಲ್ಲಿ ಲಕ್ಷಾಂತರ ಜನ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುತ್ತಾರೆ. ಅವರು ಹಿಂಸೆ ಮಾಡುತ್ತಾರೆಯೇ ಎಂದು ಮೋದಿ ಕೂಡ ಪ್ರಶ್ನಿಸಿದ್ರು.


























