ಬಂಟ್ವಾಳ : ನಿರ್ಮಾಣ ಹಂತದಲ್ಲಿರುವ ರುದ್ರಭೂಮಿಯಿಂದ ಬೆಲೆಬಾಳುವ ಸಿಲಿಕಾನ್ ಛೇಂಬರ್ ಅನ್ನು ಹಾಗೂ ಇತರ ಸಾಮಗ್ರಿಗಳನ್ನು ಕಳವುಗೈದ ಘಟನೆ ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ಸಾರ್ವಜನಿಕ ಸ್ಮಶಾನದ ಕಾಮಗಾರಿಗಾಗಿ, ಸಿಲಿಕಾನ್ ಛೇಂಬರ್ ನ್ನು 08.03.2024 ರಂದು ಅಳವಡಿಸಲಾಗಿದ್ದು, 01.07.2024 ರಂದು ಬೆಳಿಗ್ಗೆ ಕಟ್ಟಡ ಕಾಮಗಾರಿಯ ಕಂಟ್ರಾಕ್ಟರ್ ನೋಡಿದಾಗ, ಸದ್ರಿ ಸಿಲಿಕಾನ್ ಛೇಂಬರ್‌ನ ಬಿಡಿ ಭಾಗ ಮತ್ತು ಕಾಮಗಾರಿ ಸಾಮಾಗ್ರಿಗಳು ಕಳವಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ಬಂದ ಮೇರೆಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಆಡಳಿತ ಮಂಡಳಿಯವರು ಹೋಗಿ ಪರಿಶೀಲಿಸಿದ್ದು, ಕಳ್ಳತನ ನಡೆದಿರುವುದು ದೃಢಪಟ್ಟಿರುತ್ತದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 70,000/- ಆಗಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯ ಅ.ಕ್ರ53/2024 ಕಲಂ: 303(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























