ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2024-25ನೇ ಸಾಲಿನ ಶಿಕ್ಷಕ-ರಕ್ಷಕ ಮಹಾಸಭೆ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರಿನ ನರರೋಗ ಹಾಗೂ ಮಾನಸಿಕ ರೋಗ ತಜ್ಞರಾದ ಡಾ.ಜಯಂತ್ ಕುಮಾರ್ ರವರು ನೆರವೇರಿಸಿ ಮಾತನಾಡಿ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮಹತ್ವದ ಕೆಲಸ ಮಾಡುತ್ತಿರುವ ಸಂಸ್ಥೆ ಪ್ರಗತಿ ಸ್ಟಡಿ ಸೆಂಟರ್., ಮಕ್ಕಳು 18 ವರ್ಷದವರೆಗೆ ಶಿಕ್ಷಣದಿಂದ ವಂಚಿತರಾಗಬಾರದು, ವಿದ್ಯಾರ್ಥಿಗಳು ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರು ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ.ವಿ. ಮಾತನಾಡಿ, ಶಿಸ್ತು ಇಲ್ಲದೆ ಶಿಕ್ಷಣವಿಲ್ಲ, ಶಿಸ್ತು ಇಲ್ಲದೆ ಸರಸ್ವತಿ ಒಲಿಯುವುದಿಲ್ಲ, ಹಾಗಾಗಿ ಮಕ್ಕಳ ಬದಲಾವಣೆಗೆ ಪೋಷಕರ ಸಹಕಾರ ಅತೀ ಅವಶ್ಯಕ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮಾತನಾಡಿ, ಬದುಕಿನಲ್ಲಿ ತಾಳ್ಮೆ ಬಹಳ ಮುಖ್ಯ ಅಂಕಗಳಿಗೆಯಲ್ಲಿ ಪಡೆದ ಸೋಲು ಬದುಕಿನ ಸೋಲಲ್ಲ ವಿದ್ಯಾರ್ಥಿಗಳ ಬದುಕು ಉಜ್ವಲಗೊಳಿಸುವಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾಗೋಕುಲ್‌ನಾಥ್ ಮಾತನಾಡಿ, ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳು ಹಾಗೂ ಅದರ ಉಪಯೋಗದ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಮುಖ್ಯಗುರು ಪ್ರಮೀಳಾ ಎನ್.ಡಿ. ಯವರು ನೂತನ ವರ್ಷದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಪ್ರಮಾಣವಚನ ನಡೆಸಿದರು. ಶಾಲೆಯ ನಿಯಮ ಹಾಗೂ ನಿಬಂಧನೆಯ ಕುರಿತು ಮಾಹಿತಿ ನೀಡಿದರು.
ಲೆಕ್ಕಶಾಸ್ತ್ರ ಉಪನ್ಯಾಸಕಿ ಮಾಧವಿ ಮಾತನಾಡಿ, ಪೋಷಕ ಹಾಗೂ ಶಿಕ್ಷಕರ ನಡುವೆ ಉತ್ತಮ ಭಾಂದವ್ಯ ಇರಬೇಕು. ವಿದ್ಯಾರ್ಥಿಗಳಲ್ಲಿ ಓದಿನ ಹಸಿವೆ ಇರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ನಾಯಕ ರವಿಗಣೇಶ್ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ತಾನು ಪಡೆದುಕೊಂಡ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಪೋಷಕರು- ಶಿಕ್ಷಕರೊಡನೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಅನುಪಮ ಸ್ವಾಗತಿಸಿದರು. ಮಧುಶ್ರೀ ವಂದಿಸಿದರು. ಹರ್ಷಿತ ನಿರೂಪಿಸಿದರು.


























