ಪುತ್ತೂರು : ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಇದೀಗ ಕಾರಣಾಂತರದಿಂದ ತಡೆಹಿಡಿಯಲಾದ 2024ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ 2024(NET) ಯ ಮರು ಪರೀಕ್ಷೆಯನ್ನು ಸರಕಾರವು ಆಗಸ್ಟ್ ತಿಂಗಳಿನ ಅಂತ್ಯದಲ್ಲಿ ನಡೆಸಲು ಉದ್ದೇಶಿಸಿದೆ, ಇದಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಒಂದು ತಿಂಗಳ ಅವಧಿಯಲ್ಲಿ ಆನ್ಲೈನ್ ಮೂಲಕ ತರಬೇತಿಯನ್ನು ನೀಡಲಿದ್ದು, ಮರು ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು ಈ ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಕಳೆದ K-SET/KAR-TETಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದ ವಿದ್ಯಾಮಾತಾ ಅಕಾಡೆಮಿ., ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET), ಶಿಕ್ಷಕರ ನೇಮಕಾತಿ,ರಾಷ್ಟ್ರೀಯ ಅರ್ಹತಾ ಪರೀಕ್ಷೆ ಹಾಗೂ ಇತರೆ ಶಿಕ್ಷಕರ ನೇಮಕಾತಿ, ಉಪನ್ಯಾಸಕರ ನೇಮಕಾತಿಗೆ ಸಂಬಂದಿಸಿದ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿರುವ ವಿದ್ಯಾಮಾತಾ ಅಕಾಡೆಮಿಯ 150ಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಾರಾಗಿ ನೇಮಕಾತಿಗೊಂಡಿರುವುದನ್ನು ಸ್ಮರಿಸಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ತರಬೇತಿಯು ಆನ್ಲೈನ್ ಮೂಲಕ ದಿನಾಂಕ 10/07/2024 ರಿಂದ ದಿನನಿತ್ಯ ಒಂದು ಗಂಟೆ ಅಂದರೆ ರಾತ್ರಿ ಸಮಯ 8 ರಿಂದ 9 ರವರೆಗೆ ನಡೆಯಲಿದೆ,ಆಸಕ್ತ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದೆ.ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋ : 96204 68869 / 9148935808
ಸುಳ್ಯ ಶಾಖೆ: TAPCMS ಬಿಲ್ಡಿಂಗ್ ಕಾರ್ ಸ್ಟ್ರೀಟ್ ರಥಬೀದಿ ಸುಳ್ಯ ದ.ಕ 574239
ಫೋ : 9448527606
ಕಾರ್ಕಳ ಶಾಖೆ:
ಒಂದನೆಯ ಮಹಡಿ, MCC ಬ್ಯಾಂಕ್ ಮೇಲ್ಗಡೆ, ತಾಲೂಕು ಕಚೇರಿ ರಸ್ತೆ, (ಬಂಡಿಮಠ ಬಸ್ ಸ್ಟ್ಯಾಂಡ್ ಎದುರು ರಸ್ತೆ ) ಕಾರ್ಕಳ
ಫೋ :- 8310484380 / 9740564044