ಉಪ್ಪಿನಂಗಡಿ : ನಾದುರಸ್ಥಿಯಲ್ಲಿದ್ದ ಬ್ರಿಟಿಷ್ ಕಾಲದ ಸೇತುವೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿಗೆ ನಿರ್ಮಿಸಲಾಗಿರುವ ಸೇತುವೆಯಲ್ಲಿ ಇನ್ಮುಂದೆ ಯಾವುದೇ ತರಹದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಸೇತುವೆಯ ಎರಡೂ ಕಡೆಗಳಲ್ಲಿಯೂ ಬ್ಯಾರಿಕೇಟ್ ಅಳವಡಿಸಿರುವ ಜಿಲ್ಲಾಡಳಿತ ಸೇತುವೆ ಬಂದ್ ಮಾಡಿದೆ.
ಸೇತುವೆಗೆ ಕಳ್ಳರಕಾಟದ ಬಗ್ಗೆ ವರದಿಯಾಗಿದ್ದು, ಸೇತುವೆಯ ಎರಡೂ ಪಾರ್ಶ್ವದ ಕಬ್ಬಿಣದ ಸರಳುಗಳನ್ನು ಕಳ್ಳರು ಕದ್ದೊಯ್ದಿದ್ದು, ಸರಳುಗಳ ಭದ್ರತೆ ಇಲ್ಲದ ಜಾಗದಲ್ಲಿ ಸಾರ್ವಜನಿಕರು ಸೆಲ್ಫಿ ತೆಗೆಯುತ್ತಿದ್ದರು. ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತ ಸೇತುವೆ ಮೇಲೆ ವಾಹನ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.