ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಮೊಬೈಲ್ ಅಪ್ಲಿಕೇಷನ್ಗಳಿಂದ ದೂರ ಇರಿ ಎಂದು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಏಜೆನ್ಸಿ ಸೈಬರ್ ದೋಸ್ತ್ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನ್ ಮೂಲಕ ವಂಚಿಸಿ ಯಾಮಾರಿಸ್ತಿದ್ದು, ಜಾಗೃತರಾಗಿರಿ ಎಂದು ಹೇಳಿದೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸೈಬರ್ ದೋಸ್ತ್.. CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್ ಬಗ್ಗೆ ಜಾಗರೂಕರಾಗಿರಿ. ಇದು ವಿದೇಶಿ ಶತ್ರುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದೆ.
ಇನ್ನು ಈ ಅಪ್ಲಿಕೇಷನ್ನನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಆದರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಅಪ್ಲಿಕೇಷನ್ 4.4 ರೇಟ್ ಪಡೆದುಕೊಂಡಿದೆ. ಇದರ ಬಗ್ಗೆ 7.19 ಸಾವಿರ ಮಂದಿ ವಿಶ್ಲೇಷಣೆ ಮಾಡಿದ್ದಾರೆ. ಈ ಅಪ್ಲಿಕೇಷನ್ ಸಾಲ ಸೌಲಭ್ಯ ಒದಗಿಸುತ್ತಿತ್ತು, ಅದರ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ನಿಮ್ಮ ಮೊಬೈಲ್ನಲ್ಲಿ ಈ ಅಪ್ಲಿಕೇಷನ್ ಇದ್ದರೆ ಕೂಡಲೇ ಅನ್ ಇನ್ಸ್ಟಾಲ್ ಮಾಡಿ. ಇಲ್ಲದಿದ್ರೆ ನಿಮ್ಮ ಮೊಬೈಲ್ನಲ್ಲಿರುವ ದಾಖಲೆಗಳಿಗೆ ಹಾನಿ ಮಾಡಬಹುದು. ಜೊತೆಗೆ ಆರ್ಥಿಕವಾಗಿ ಪೆಟ್ಟು ನೀಡಬಹುದು ಎಂದು ಹೇಳಿದೆ.
Beware! The CashExpand-U Finance Assistant – Loan app is learnt to be associated with hostile foreign entities. #LoanApps #Cybercrime #DigitalSafety #Lending #I4C #MHA #Cyberdost #Cybersecurity #CyberSafeIndia @RBI @GooglePlay @FinMinIndia pic.twitter.com/yrKDTCPR41
— Cyber Dost (@Cyberdost) July 5, 2024


























