ವಿಟ್ಲ : ಉಮಾಮಹೇಶ್ವರ ಭಜನಾ ಮಂಡಳಿ ಇದರ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇಲ್ಲಿನ ಸಭಾಭವನದಲ್ಲಿ ನಡೆಯಿತು.
ವಿಟ್ಲ ಅರಮನೆಯ ಕೃಷ್ಣ ಬಳ್ಳಾಲ್ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಪದಾಧಿಕಾರಿಗಳ ವಿವರ :
- ಅಧ್ಯಕ್ಷರು : ಪುರಂದರ ಇಂದ್ರಪಡ್ಪು
- ಕಾರ್ಯದರ್ಶಿ : ಸಂಪತ್ ಕುಮಾರ್ ಮಾಮೇಶ್ವರ
- ಸಂಚಾಲಕರು : ಪ್ರಶಾಂತ್
- ಉಪಾಧ್ಯಕ್ಷರು : ಇಂದಿರಾ, ಶಶಿಧರ ಕೈಂತಿಲ
- ಜೊತೆ ಕಾರ್ಯದರ್ಶಿ : ಹೇಮಚಂದ್ರ ಮಾಮೇಶ್ವರ
- ಕೋಶಾಧಿಕಾರಿಯಾಗಿ : ಪ್ರವೀಣ್ ಕುಮಾರ್
- ಜೊತೆ ಕೋಶಾಧಿಕಾರಿ : ದಿವಾಕರ ಶೆಟ್ಟಿ
ಕಾರ್ಯಕ್ರಮದಲ್ಲಿ ಉಮಾಮಹೇಶ್ವರ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ವೀರಪ್ಪ ಗೌಡ ರಾಯರಬೆಟ್ಟು, ಕಾರ್ಯದರ್ಶಿ ಜಗದೀಶ್ಚಂದ್ರ, ಮಾಜಿ ಅಧ್ಯಕ್ಷರಾದ ಮೋನಪ್ಪ ಗೌಡ ರಾಯರಬೆಟ್ಟು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

























