ಪುತ್ತೂರು : ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವು ಕಡೆಗಳಲ್ಲಿ ಅನಾಹುತ ಸಂಭವಿಸುತ್ತಿದೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವು ಕಾರ್ಯ ನಡೆಸಲಾಗುತ್ತಿದೆ.

ಮರ ಬೀಳುವ ಸಮಯ ರಸ್ತೆಯಲ್ಲಿ ತೆರಳುತ್ತಿದ್ದ ಪುತ್ತೂರು ಪಡೀಲಿನ ಎಂ.ಡಿ.ಎಸ್ ಸಂಸ್ಥೆಯ ಲಾರಿಗೆ ಹಾನಿಯಾಗಿದ್ದು, ಎಂ.ಡಿ.ಎಸ್ ನ ಮಾಲಕರೇ ಈ ವೇಳೆ ವಾಹನ ಚಲಾಯಿಸುತ್ತಿದ್ದು, ಅಪಾಯದ ಸೂಚನೆ ತಿಳಿಯುತ್ತಿದ್ದಂತೆ ಹಠಾತ್ ಲಾರಿಯನ್ನು ಸೈಡ್ ಹಾಕಿದ ಹಿನ್ನಲೆ ಅಪಾಯ ತಪ್ಪಿದಂತಾಗಿದೆ.
ಲಾರಿಗೆ ಹಾನಿಯಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಅಪಾಯ ತಪ್ಪಿದೆ.
























