ಮಂಗಳೂರು; ಹಲ್ಲೆ ಆರೋಪದಡಿಯಲ್ಲಿಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರಿಗೆ ವಿಪರೀತ ಬಿಲ್ ಮಾಡಿರುವ ಆರೋಪ ಮಾಡಿ ಸುಹೈಲ್ ಕಂದಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಂಡಿಯಾನ ಆಸ್ಪತ್ರೆ ಮಂಡಳಿ ಸುಹೈಲ್ ಕಂದಕ್ ಅವರು ಐಸಿಯು ವಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ದೂರನ್ನು ನೀಡಿತ್ತು. ಈ ದೂರಿನ ಆಧಾರದಲ್ಲಿ ಮಂಗಳೂರು ಪೊಲೀಸರು ಸುಹೈಲ್ ಕಂದಕನ್ನು ಬಂಧಿಸಿದ್ದಾರೆ. ಸುಹೈಲ್ ಕಂದಕ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕಂಕನಾಡಿ ನಗರ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಹೈಲ್ ಕಂದಕ್ : ನಾನು ಗಲಾಟೆ ಮಾಡಿಲ್ಲ, ನಾನು ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದಕ್ಕಾಗಿ ನನ್ನ ಮೇಲೆ ದೂರು ನೀಡಲಾಗಿದೆ. ಇದೇ ಕೇಸ್ ವಿಷಯವಾಗಿ ನಾನು ಒಂದು ವಾರ ಮುಂಚೆ ಮುಚ್ಚಲಿಕೆ ಬರೆದು ಕೊಟ್ಟಿದ್ದೇನೆ. ಪುನಃ ಅದನ್ನು ಕೆದಕಿ ನನ್ನ ಮೇಲೆ ಕೇಸ್ ಹಾಕಲಾಗಿದೆ. ಬಿಜೆಪಿ ಪಕ್ಷ ತನ್ನ ಪ್ರಭಾವವನ್ನು ಬೀರಿ ಸಾಮಾಜಿಕ ಕಾರ್ಯ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅವರು ಕೆಲಸ ಮಾಡದ ಹಾಗೆ ಪ್ರಭಾವವನ್ನು ನಮ್ಮನ್ನು ಬಂಧಿಸಲಿಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದರೇ ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಮುಂದುವರೆಸುತ್ತೇವೆ ಎಂದರು.