ಪುತ್ತೂರು : ಚೆಲ್ಯಡ್ಕ ಸೇತುವೆಯ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದೇವಸ್ಯ – ದೇರ್ಲ ಲೋಕೋಪಯೋಗಿ ರಸ್ತೆಯಲ್ಲಿ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿರಿಂದಾಗಿ ಒಳಮೊಗ್ರು , ಆರ್ಯಾಪು , ಬೆಟ್ಟಂಪಾಡಿ , ಬಲ್ನಾಡು ಗ್ರಾಮದ ವಿಧ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದ್ದು, ಒಳಮೊಗ್ರು ಗ್ರಾಮದ ಒಂದು ಹಳ್ಳಿ ಸಂಪರ್ಕ ಕಡಿದು ಕೊಂಡಂತಾಗಿದೆ. ಆದ್ದರಿಂದ ಶೀಘ್ರವಾಗಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ಬಳಿ ಮನವಿ ಮಾಡಿದ್ದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ಅಶೋಕ್ ಕುಮಾರ್ ರೈ :
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ನಾಳೆಯಿಂದ ಕೆ.ಎಸ್.ಆರ್.ಟಿ.ಸಿಯಿಂದ ತಾತ್ಕಾಲಿಕ ಬಸ್ ಕಾರ್ಯನಿರ್ವಹಿಸಲಿದೆ.
ಪುತ್ತೂರಿನಿಂದ ಪರ್ಲಡ್ಕ- ವಳತ್ತಡ್ಕ, ಮಾರ್ಗವಾಗಿ ಗುಮ್ಮಟಗದ್ದೆಗೆ ನಾಳೆಯಿಂದ ಸರಕಾರಿ ಬಸ್ ಸೇವೆ ಆರಂಭವಾಗಲಿದೆ.


























