ಪುತ್ತೂರು : ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಅಂತಿಮ ದರ್ಶನಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.

ಕೂರತ್ ಮಸೀದಿ ವಠಾರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.
ಮಸೀದಿ ವಠಾರದಲ್ಲಿ ಜನ ಭರ್ತಿಯಾದ ಹಿನ್ನಲೆ ರಸ್ತೆಯಲ್ಲಿ ಹಲವಾರು ಮಂದಿ ನಿಂತುಕೊಂಡಿದ್ದರು.

ಸ್ಪೀಕರ್ ಯುಟಿ ಖಾದರ್, ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವು ಗಣ್ಯರು ಭಾಗಿಯಾಗಿದ್ದರು.
ಕುದ್ಮಾರು ಎಂಬಲ್ಲಿರುವ ಕೂರತ್ ತಂಙಳ್ ಅವರಿಗೆ ಸೇರಿದ ಜಾಗದಲ್ಲಿ ದಫನ ಮಾಡಲಾಯಿತು.


























