ಪುತ್ತೂರು : ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಪ್ರಿಂಟ್ ಹೌಸ್’ ಪ್ರಿಂಟಿಂಗ್ ನ ಹೊಸ ತಂತ್ರಜ್ಞಾನದೊಂದಿಗೆ ಸ್ಥಳಾಂತರಗೊಂಡು ನೆಹರುನಗರದ ಅಶ್ವಿನಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಜು.11 ರಂದು ಶುಭಾರಂಭಗೊಳ್ಳಲಿದೆ.
ಮಂಗಳೂರು ಉರ್ವದಲ್ಲಿರುವ ಗುಜ್ಜಾಡಿ ಜ್ಯುವೆಲ್ಲರ್ಸ್ ನ ಮಾಲಕರಾದ ಅಜಯ್ ನಾಯಕ್ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಮುಳಿಯ ಜ್ಯುವೆಲ್ಲರ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಕೇಶವಪ್ರಸಾದ್ ಮುಳಿಯ ದೀಪಪ್ರಜ್ವಲನೆ ನೆರವೇರಿಸಲಿದ್ದಾರೆ.
ಮಾಣಿ ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಪಿ. ಶೆಟ್ಟಿ, ಮೈತ್ರಿ ಎಲೆಕ್ಟ್ರಿಕ್ ಕಂಪೆನಿಯ ಮಾಲಕರಾದ ರವಿನಾರಾಯಣ ಎಂ., ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಯೂನಿಯನ್ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕರಾದ ಸುರೇಶ್ ನಾಯಕ್ ಬಿ., ಅಶ್ವಿನಿ ಫೈನಾನ್ಸ್ ನ ರಾಜಾರಾಮ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.



























