ಸುಬ್ರಹ್ಮಣ್ಯ : ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯ ಮೆಸ್ಕಾಂ ಶಾಖೆಯಲ್ಲಿ 2024ರ ಮಾ.1 ರಂದು 8 ಬ್ಯಾಟರಿ ಕಳ್ಳತನವಾಗಿದ್ದು, Cr No-14/2024 ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ವೆಂಕಟೇಶ್ ಎಂಬಾತನನ್ನು ಬಂಧಿಸಿ ಆತನಿಂದ ಹಣ ಹಾಗೂ ಬ್ಯಾಟರಿ ವಶಪಡಿಸಿಕೊಳ್ಳಲಾಗಿತ್ತು.ಇನ್ನೋರ್ವ ಮುತ್ತು (ಮಣಿ) ಎಂಬಾತನನ್ನು ಮಂಗಳೂರಿನಲ್ಲಿ ಅರೆಸ್ಟ್ ಮಾಡಿ ಆತನಿಂದ ಕೃತ್ಯಕ್ಕೆ ಬಳಕೆಯಾದ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು ವಿಟ್ಲ ಹಾಗೂ ಸುಳ್ಯ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿರುವುದಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಎಸ್.ಐ. ಕಾರ್ತಿಕ್, ಎಸ್.ಐ ಮಹೇಶ ಪಿ ಹಾಗೂ ಅಪರಾಧ ಸಿಬ್ಬಂದಿಯಾದ ಮಹೇಶ್ ಹಾಗೂ ಆಕಾಶ್ ಪ್ರಮುಖ ಪಾತ್ರವಹಿಸಿರುತ್ತಾರೆ.
ಎ.ಎಸ್.ಐ ಕರುಣಾಕರ, ಸಂಧ್ಯಾ, ವಿಠಲ್ ರವರು ಪೂರಕವಾಗಿ ಕಾರ್ಯ ನಿರ್ವಹಿಸಿರುತ್ತಾರೆ



























