ಮಂಗಳೂರು : ಬಜ್ಪೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡಲು ಕೂಡ ಭಯಪಡುವ ಸನ್ನಿವೇಷ ರೂಪುಗೊಳ್ಳುತ್ತಿದೆ.
ಮಂಗಳೂರು ಹೊರವಲಯದ ಬಜ್ಪೆಯ ಪೆರಾರ ಎಂಬಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಪುಚ್ಚಾಳದ ಸುಂದರ್ ಎಂಬುವವರ ಮನೆಯ ನಾಯಿ ಮರಿಯನ್ನು ಚಿರತೆ ಹೊತ್ತೊಯ್ದಿದೆ. ಚಿರತೆ ನಾಯಿಯನ್ನು ಬೇಟೆಯಾಡಿದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾತ್ರಿ ವೇಳೆ ಮನೆ ಮುಂದೆ ಮಲಗಿದ್ದ ನಾಯಿ ಮರಿಯನ್ನ ನೋಡಿದ ಚಿರತೆ, ಕಳ್ಳನಂತೆ ಬಂದು ಹೊತ್ತೊಯ್ದಿದೆ. ಕಳೆದ ಕೆಲದಿನಗಳಿಂದ ಬಜಪೆ ಪರಿಸರದಲ್ಲಿ ಚಿರತೆ ಒಡಾಡುತ್ತಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.




























