ವಿಟ್ಲ : ಶ್ರೀ ದುರ್ಗಂಬಾ ಕಲಾವಿದರು ವರಪ್ಪದೆ ವಿಟ್ಲ ಇವರ 2ನೇ ವರ್ಷದ ನಾಟಕ ‘ಕಥೆ ಬರೆದಾತಿಜಿ’ ಇದರ ಮುಹೂರ್ತ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಕೃಷ್ಣಯ್ಯ ಬಳ್ಳಾಲರ ಸಹಿತ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
ರಮೇಶ್ ವರಪ್ಪದೆ ತಂಡದ ಸಾರಥ್ಯ ವಹಿಸಿದ್ದು, ಹರೀಶ್ ಪಡೀಲ್ ನಾಟಕ ರಚಿಸಿದ್ದಾರೆ. ಯದು ವಿಟ್ಲ ನಾಟಕ ನಿರ್ದೆಶಿಸಿದ್ದು, ನಟ ಚೇತನ್ ರೈ ಮಾಣಿ ಸಲಹೆ ಸಹಕಾರ ನೀಡಿದ್ದಾರೆ.