ಬಂಟ್ವಾಳ : ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಸರಪಾಡಿ- ಬಿ.ಸಿ.ರೋಡು ಮಧ್ಯೆ ಸಂಚರಿಸುವ ಖಾಸಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ.
ಬಸ್ ಸಂಪೂರ್ಣವಾಗಿ ಗದ್ದೆಗೆ ಪಲ್ಟಿಯಾಗಿದ್ದು, ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ವಿಪರೀತ ಮಳೆಯಿಂದಾಗಿ ಗದ್ದೆಯಲ್ಲಿ ನೀರು ತುಂಬಿದ್ದು, ಹೀಗಾಗಿ ಕೆಲ ಪ್ರಯಾಣಿಕರ ಮೈಯೆಲ್ಲಾ ಕೆಸರಾಗಿತ್ತು ಎನ್ನಲಾಗಿದೆ.




























