ಸುಳ್ಯ : ಭಾರೀ ಮಳೆಗೆ ಮನೆಯೊಂದರ ಪಕ್ಕ ಅಪಾಯಕಾರಿ ಹೊಂಡ ನಿರ್ಮಾಣವಾದ ಘಟನೆ ಸುಳ್ಯ ತಾಲೂಕಿನ ಸಂಪಾಜೆಯ ರಾಜಾರಾಂಪುರ ಕಾಲೋನಿಯಲ್ಲಿ ನಡೆದಿದೆ.
ರಾಜಾರಾಂಪುರ ಕಾಲೋನಿ ನಿವಾಸಿ ಬಾಳಪ್ಪ ಎಂಬವರ ಮನೆಯ ಪಕ್ಕದಲ್ಲಿ ಅಪಾಯಕಾರಿ ಗುಂಡಿ ನಿರ್ಮಾಣವಾಗಿದ್ದು, ಸುಮಾರು 15-20 ಫೀಟ್ ಆಳವಾದ ಸುರಂಗ ರೀತಿಯ ಗುಂಡಿ ನಿರ್ಮಾಣವಾಗಿದೆ.
ಹೊಂಡದೊಳಗಿನ ಸುರಂಗದಿಂದ ನೀರು ಉಕ್ಕಿ ಬರುತ್ತಿದ್ದು, ಬಾಳಪ್ಪ ಅವರ ಮನೆ ಅಪಾಯದಂಚಿನಲ್ಲಿದೆ.
ಜಿಲ್ಲಾಡಳಿತದಿಂದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.