ವಿಟ್ಲ : ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ – ವಿಷ್ಣುನಗರ, ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲು ಮಾಡ ಆಶ್ರಯದಲ್ಲಿ ಕುಂಕುಮಾರ್ಚನೆ ಮತ್ತು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಆ.16 ಶುಕ್ರವಾರದಂದು ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಆ.26 ಸೋಮವಾರದಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ ಮರುವಾಳ, ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಕಟ್ನಾಜೆ, ಕೋಶಾಧಿಕಾರಿ ಜಿನ್ನಪ್ಪ ಗೌಡ ಗಾಳಿಗುಡ್ಡ, ಮಾತೃ ಸಮಿತಿಯ ಅಧ್ಯಕ್ಷರಾದ ಭವಾನಿ ಗಾಳಿಗುಡ್ಡೆ, ಶ್ರೀ ವಿಷ್ಣುಮೂರ್ತಿ ಯುವಕ ಮಂಡಲದ ಅಧ್ಯಕ್ಷರಾದ ಮನೋಜ್ ಕಂಪ, ಆಡಳಿತ ಸಮಿತಿಯ ಪದಾಧಿಕಾರಿಗಳು ಮಾತೃ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

