ಮಂಗಳೂರು : ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಅಧಿಕಾರ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಹಿನ್ನಲೆ ನೂತನ ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಇಂದು ಮಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯಿತು.
ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಈ ಕುರಿತು ಸಮಾಲೋಚನೆಗಾಗಿ ಪಕ್ಷದ ಪ್ರಮುಖರ ಸಭೆ ಕರೆದಿದ್ದು, ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ಜರುಗಿತು.
ಸಭೆಯಲ್ಲಿ ನಗರ ಮಂಡಲ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರು ಸೂಚಿಸಲು ಪದಾಧಿಕಾರಿಗಳ ಬಳಿ ತಿಳಿಸಲಾಯಿತು ಈ ಸಂದರ್ಭ ಹಲವರು ಹಲವು ಹೆಸರುಗಳನ್ನು ಸೂಚಿಸಿದರು.
ಈ ತಿಂಗಳ ಅಂತ್ಯದೊಳಗೆ ಅಧ್ಯಕ್ಷ ,ಕಾರ್ಯದರ್ಶಿ ಸ್ಥಾನಕ್ಕೆ ಹೆಸರು ಘೋಷಣೆ ಮಾಡುವುದಾಗಿ ಸಭೆಯಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಗ್ರಾಮಾಂತರ ಮಂಡಲದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಉಮೇಶ್ ಕೋಡಿಬೈಲ್, ಪ್ರಸನ್ನ ಮಾರ್ತಾ, ಹರಿಪ್ರಸಾದ್ ಯಾದವ್, ರಾಜೀವ್ ಭಂಡಾರಿ, ನಿತೀಶ್ ಶಾಂತಿವನ, ಸಹಜ್ ರೈ ಬಳಜ್ಜ, ದಯಾನಂದ ಶೆಟ್ಟಿ ಉಜಿರೆಮಾರ್, ಅರುಣ್ ವಿಟ್ಲ, ಪುರುಷೋತ್ತಮ ಮುಂಗ್ಲಿಮನೆ, ರಾಜೇಶ್ ಬೇಕಲ್, ಹರೀಶ್ ಪೂಜಾರಿ ಮರುವಾಳ, ಮುರುಳಿಕೃಷ್ಣ ಹಸಂತಡ್ಕ, ರತನ್ ರೈ,ಯತೀಂದ್ರ ಕೊಚ್ಚಿ, ಪುನೀತ್ ಮಾಡತ್ತಾರ್, ಸುನಿಲ್ ದಡ್ಡು , ನಾಗೇಶ್ ಕೆಮ್ಮಾಯಿ, ಪ್ರಶಾಂತ್ ನೆಕ್ಕಿಲಾಡಿ, ರವಿ ಕುಮಾರ್ ಮಠ, ಸುರೇಶ್ ಅತ್ರಮಜಲ್, ಪ್ರವೀಣ್ ಶೆಟ್ಟಿ ತಿಂಗಳಾಡಿರವರ ಹೆಸರನ್ನು ಸೂಚಿಸಲಾಯಿತು.
ನಗರ ಮಂಡಲದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಶೇಖರ್ ರಾವ್ ಬಪ್ಪಳಿಗೆ, ಅನಿಲ್ ತೆಂಕಿಲ, ಅನ್ನಪೂರ್ಣೇಶ್ವರಿ, ಸಚಿನ್ ಶೆಣೈ, ವಸಂತ ಲಕ್ಷ್ಮಿ, ಗೌರಿ ಬನ್ನೂರು, ಯುವರಾಜ್ ಪೆರಿಯತ್ತೋಡಿ, ವಿಶ್ವನಾಥ ಗೌಡ, ಶಿವಕುಮಾರ್, ಸಂತೋಷ್ ಕೈಕಾರ, ದಯಾರಾಜ್ ತೆಂಕಿಲ, ಸ್ವಯಂಪ್ರಭ ರವರ ಹೆಸರನ್ನು ಸೂಚಿಸಲಾಯಿತು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಿಶೋರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಗೋಪಾಲಕೃಷ್ಣ ಹೇರಳೆ, ಯತೀಶ್ ಅರ್ವಾರ್, ಸುನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.