ಆಂಧ್ರಪ್ರದೇಶ : ಗರ್ಲ್‌ಫ್ರೆಂಡ್ ಜೊತೆ ವಾಸವಿದ್ದ ಗಂಡನಿಗೆ ಪತ್ನಿ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಶಾಖಪಟ್ಟಣದ ಸೀತಮ್ಮಧಾರದಲ್ಲಿ ವಿವೇಕ್ ಎಂಬಾತನಿಗೆ ಪತ್ನಿ ಥಳಿಸಿದ್ದಾಳೆ.
ವಿವೇಕ್ ಎಂಬ ವ್ಯಕ್ತಿ ತನ್ನ ಹೆಂಡತಿಯನ್ನು ಬಿಟ್ಟು ಗರ್ಲ್ ಫ್ರೆಂಡ್ ಜೊತೆಗೆ ಸಂಸಾರ ಮಾಡುತ್ತಿದ್ದ. ವಿವೇಕ್ ಹಾಗೂ ಗರ್ಲ್ ಫ್ರೆಂಡ್ ಇದ್ದ ಮನೆಗೆ ಹೋದ ಪತ್ನಿ ಹರಿತಾ, ಪತ್ನಿಯ ಕುಟುಂಬಸ್ಥರು ಹಿಗ್ಗಾಮುಗ್ಗ ಬಾರಿಸಿದ್ದಾರೆ.
2020ರಲ್ಲಿ ವಿವೇಕ್-ಹರಿತಾ ನಡುವೆ ಮದುವೆ ಆಗಿತ್ತು. ಮದುವೆಯಾದ ಮೇಲೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಇದರಿಂದ ಪತ್ನಿಗೆ ವಿಚ್ಛೇದನ ನೀಡಲು ವಿವೇಕ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಡಿವೋರ್ಸ್‌ಗೆ ಅರ್ಜಿ ಹಾಕಿದ್ದ ವಿವೇಕ್ ಅವರು ಗರ್ಲ್ ಫ್ರೆಂಡ್ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದರು. ವಿವೇಕ್ ವಾಸ ಇದ್ದ ಮನೆಗೆ ನುಗ್ಗಿ ವಿವೇಕ್ ಹಾಗೂ ಆತನ ಗರ್ಲ್ ಫ್ರೆಂಡ್‌ಗೆ ಪತ್ನಿ ಹರಿತಾ ಥಳಿಸಿದ್ದಾರೆ.


























