ಪುತ್ತೂರು : ಭಾರೀ ಮಳೆಗೆ ತಡೆಗೋಡೆ ಕುಸಿದ ಘಟನೆ ಮುಕ್ವೆ ಮಸೀದಿ ಸಮೀಪ ನಡೆದಿದೆ.

ಮುಕ್ವೆ ಮಸೀದಿ ಸಮೀಪ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲಾದ ಸುಮಾರು 8 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ತಡೆಗೋಡೆ ಕುಸಿದು ಬಿದ್ದಿದ್ದು, ಸಮೀಪದಲ್ಲಿರುವ ಮನೆಗಳು ಅಪಾಯದಂಚಿನಲ್ಲಿದೆ.

ತಡೆಗೋಡೆ ಜರಿದು ಹಳ್ಳಕ್ಕೆ ಬಿದ್ದಿದ್ದು, ಈ ಹಿನ್ನಲೆ ನೀರು ಬ್ಲಾಕ್ ಆಗಿದ್ದು, ರಾತ್ರಿಯಿಡಿ ಮಳೆ ಸುರಿದರೆ ಸಮೀಪದಲ್ಲಿರುವ ಎರಡು ಮನೆಗಳಿಗೆ ನೀರು ನುಗ್ಗುವ ಸಂಭವವಿದ್ದು, ಆತಂಕ ಸೃಷ್ಟಿಯಾಗಿದೆ.

ಘಟನಾ ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.


