ಸುಳ್ಯ : ತಾಲೂಕಿನ ಸಂಪಾಜೆ ಗ್ರಾಮದ ಪಡುಮಜಲು ಮನೆಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿರುವ ಅವಿನ್ ಎಂಬವರ ಪತ್ನಿ ಶಿಲ್ಪಾ (32)ಅಸೌಖ್ಯದಿಂದಾಗಿ ಮಂಗಳೂರಿನಲ್ಲಿ ನಿಧನರಾದರು.

ಶಿಲ್ಪಾ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವಿನ್ ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದರು ಹಾಗೂ ಶಿಲ್ಪಾ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದರು.

























